ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಫ್ರಾನ್ಸಿಸ್‌ ಈಗ ಗುಣಮುಖ : ಆಸ್ಪತ್ರೆಯಿಂದ ಡಿಸ್‌ಚಾರ್ಜ್‌

KannadaprabhaNewsNetwork |  
Published : Mar 24, 2025, 12:36 AM ISTUpdated : Mar 24, 2025, 04:39 AM IST
ಪೋಪ್ ಫ್ರಾನ್ಸಿಸ್‌  | Kannada Prabha

ಸಾರಾಂಶ

ತೀವ್ರ ಉಸಿರಾಟದ ಸಮಸ್ಯೆ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್‌ ಈಗ ಗುಣಮುಖರಾಗಿದ್ದ, 5 ವಾರಗಳ ಬಳಿಕ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಬಿಡುಗಡೆಗೂ ಮುನ್ನ ಕ್ಷಣ ಹೊತ್ತು ಆಸ್ಪತ್ರೆಯ ಬಾಲ್ಕನಿಯಿಂದ ನೆರೆದಿದ್ದ ಜನರಿಗೆ ಧನ್ಯವಾದ ಸಲ್ಲಿಸಿದರು.

ರೋಮ್‌/ವ್ಯಾಟಿಕನ್‌ ಸಿಟಿ: ತೀವ್ರ ಉಸಿರಾಟದ ಸಮಸ್ಯೆ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್‌ ಈಗ ಗುಣಮುಖರಾಗಿದ್ದ, 5 ವಾರಗಳ ಬಳಿಕ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾದರು. ಬಿಡುಗಡೆಗೂ ಮುನ್ನ ಕ್ಷಣ ಹೊತ್ತು ಆಸ್ಪತ್ರೆಯ ಬಾಲ್ಕನಿಯಿಂದ ನೆರೆದಿದ್ದ ಜನರಿಗೆ ಧನ್ಯವಾದ ಸಲ್ಲಿಸಿದರು.

ರೋಮ್‌ನ ಆಸ್ಪತ್ರೆಯಿಂದ ಗಾಲಿ ಕುರ್ಚಿ ಸಹಾಯದಿಂದ ವಿಶೇಷ ವಾಹನಗಳ ಮೂಲಕ ಪೋಪ್‌ರನ್ನು ವ್ಯಾಟಿಕನ್‌ಗೆ ಕರೆತರಲಾಯಿತು. ಈ ವೇಳೆ ಸಾವಿರಾರು ಭಕ್ತರು ‘ಫ್ರಾನ್ಸಿಸ್‌, ಫ್ರಾನ್ಸಿಸ್‌’ ಎಂದು ಘೋಷಣೆ ಕೂಗಿದರು.

ಪೋಪ್‌ ಶ್ವಾಸಕೋಶದ ಸೋಂಕು ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ ಫೆ.14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಮಧ್ಯೆ ಕಿಡ್ನಿ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಈ ಮಧ್ಯೆ ಆರೋಗ್ಯ ತೀವ್ರ ಹದಗೆಟ್ಟ ಕಾರಣ ವೆಂಟಿಲೇಟರ್‌ ಸಹಾಯದಿಂದ ಉಸಿರಾಡುತ್ತಿದ್ದರು. ಕೆಲ ದಿನಗಳಿಂದ ಆರೋಗ್ಯ ವೃದ್ಧಿಯಾದ ಕಾರಣ ಮಾ.6ರಂದು ಭಕ್ತರಿಗೆ ಧ್ವನಿ ಸಂದೇಶ ಕಳುಹಿಸಿದ್ದರು. ಭಾನುವಾರ ಬಿಡುಗಡೆಯಾಗಿದ್ದಾರೆ. ಇನ್ನು 2 ತಿಂಗಳು ವಿಶ್ರಾಂತಿ ಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಮಮಂದಿರ ಸಿಸಿಟೀವಿಯಲ್ಲಿ 105 ಬಾರಿ ಹುಂಡಿ ಕಳವು ಸೆರೆ
ಚೀನಾಕ್ಕೆ ಭಾರತ ಉತ್ಪನ್ನ ರಫ್ತು ಶೇ.40ರಷ್ಟು ಹೆಚ್ಚಳ!