ಬಿಹಾರದಲ್ಲಿ ಮತ್ತೊಂದು ಸೇತುವೆ ದುರಂತ : ₹1710 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕುಸಿತ

KannadaprabhaNewsNetwork |  
Published : Aug 18, 2024, 01:46 AM ISTUpdated : Aug 18, 2024, 05:10 AM IST
ಬಿಹಾರ | Kannada Prabha

ಸಾರಾಂಶ

ಬಿಹಾರದಲ್ಲಿ ಮತ್ತೊಂದು ಸೇತುವೆ ದುರಂತ ಸಂಭವಿಸಿದೆ. 1,710 ಕೋಟಿ. ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಗುವಾನಿ ಮತ್ತು ಸುಲ್ತಾನ್ ಗಂಜ್ ಸೇತುವೆಯ ಒಂದು ಭಾಗ ಶನಿವಾರ ಕುಸಿದಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸೇತುವೆ ಕುಸಿದಿದ್ದು, ಇದು ಮೂರನೇ ಸಲ.

ಪಟನಾ: ಬಿಹಾರದಲ್ಲಿ ಮತ್ತೊಂದು ಸೇತುವೆ ದುರಂತ ಸಂಭವಿಸಿದೆ. 1,710 ಕೋಟಿ. ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಗುವಾನಿ ಮತ್ತು ಸುಲ್ತಾನ್ ಗಂಜ್ ಸೇತುವೆಯ ಒಂದು ಭಾಗ ಶನಿವಾರ ಕುಸಿದಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸೇತುವೆ ಕುಸಿದಿದ್ದು, ಇದು ಮೂರನೇ ಸಲ.

ಸೇತುವೆಯ 9 ಮತ್ತು 10ನೇ ಕಂಬದ ನಡುವಿನ ಭಾಗ ಶನಿವಾರ ಕುಸಿದು ಗಂಗಾನದಿ ಪಾಲಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವು- ನೋವಿನ ವರದಿಯಾಗಿಲ್ಲ.

 ಅಗುವಾನಿ - ಸುಲ್ತಾನ್ ಗಂಜ್ ಸೇತುವೆಯು ಬಿಹಾರದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಹಲವು ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. 3.1 ಕಿ.ಮೀ ಉದ್ದದ ಈ ಸೇತುವೆ ನಿರ್ಮಾಣ ಕಾರ್ಯ 2014ರಲ್ಲಿ ಆರಂಭವಾಗಿತ್ತು. ಆದರೆ ಇಲ್ಲಿಯವರೆಗೆ ಶೇ.45 ರಷ್ಟು ಕೆಲಸಗಳು ಮಾತ್ರ ಪೂರ್ಣಗೊಂಡಿವೆ. ಈ ವರ್ಷದ ಆರಂಭದಿಂದ ಇದುವರೆಗೂ ಬಿಹಾರದಲ್ಲಿ ಕನಿಷ್ಠ 12 ಸೇತುವೆಗಳು ಕುಸಿದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಿನ್ನಮತದ ವಿವಾದ, ವಿಪಕ್ಷ ಆಕ್ರೋಶದ ಬೆನ್ನಲ್ಲೇ ಚು. ತ್ರಿಮೂರ್ತಿಗಳ ಸಭೆ
ನೋಟಿಸ್‌ ಕೊಟ್ಟವರ ಮನೆಗೇ ಇನ್ನು ಅಧಿಕಾರಿಗಳ ಬರ್ತಾರೆ-ಎಸ್‌ಐಆರ್‌ ನಿಯಮ ಸಡಿಲ