ಅಮೆರಿಕದಲ್ಲಿ ದರೋಡೆ ವೇಳೆ ತೆಲಂಗಾಣ ಮೂಲದ ವಿದ್ಯಾರ್ಥಿ ಪ್ರವೀಣ್‌ಗೆ ಗುಂಡಿಕ್ಕಿ ಹತ್ಯೆ

KannadaprabhaNewsNetwork |  
Published : Mar 07, 2025, 12:50 AM ISTUpdated : Mar 07, 2025, 04:52 AM IST
USA Flag

ಸಾರಾಂಶ

ಅಮೆರಿಕದಲ್ಲಿ ತೆಲಂಗಾಣ ಮೂಲದ 27 ವರ್ಷದ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವಿದ್ಯಾರ್ಥಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳು ಆ ವೇಳೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ನವದೆಹಲಿ: ಅಮೆರಿಕದಲ್ಲಿ ತೆಲಂಗಾಣ ಮೂಲದ 27 ವರ್ಷದ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವಿದ್ಯಾರ್ಥಿ ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳು ಆ ವೇಳೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪ್ರವೀಣ್ ಕುಮಾರ್‌ ಗಂಪಾ ಮೃತ ವಿದ್ಯಾರ್ಥಿ. ಅಮೆರಿಕದ ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಇನ್ನು 4 ತಿಂಗಳು ಕಳೆದಿದ್ದರೆ ಪುತ್ರನ ಓದು ಪೂರ್ಣಗೊಳ್ಳುತ್ತಿತ್ತು. ಅಷ್ಟರೊಳಗೆ ಈ ಕೊಲೆ ನಡೆದಿದೆ ಎಂದು ಅವರ ಪೋಷಕರು ನೋವು ವ್ಯಕ್ತಪಡಿಸಿದ್ದಾರೆ.

ಸಾಲ ಮಾಡಿ, ಚಿನ್ನ ಅಡವಿಟ್ಟು 70 ದೋಣಿ ಖರೀದಿಸಿದ್ದೆ..

ಪ್ರಯಾಗ್‌ರಾಜ್: ಮಹಾಕುಂಭದ ವೇಳೆ ದೋಣಿ ಚಲಾಯಿಸುತ್ತಿದ್ದ ಕುಟುಂಬವೊಂದು 30 ಕೋಟಿ ರು. ಸಂಪಾದಿಸಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ ಬೆನ್ನಲ್ಲೇ, ಅಂಥದ್ದೊಂದು ಸಾಧನೆ ಮಾಡಿದ ನಾವಿಕ ಪಿಂಟು ಮಹಾರಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.‘2019ರ ಅರ್ಧಕುಂಭ ಮೇಳದ ವೇಳೆಯೂ ದೋಣಿ ಸಾಗಿಸುತ್ತಿದ್ದೆವು. ಮಹಾಕುಂಭದ ವೇಳೆಗೆ ವೃತ್ತಿಯನ್ನು ವಿಸ್ತರಿಸುವ ಕನಸು ಇತ್ತಾದರೂ ಆರ್ಥಿಕ ಶಕ್ತಿ ಇರಲಿಲ್ಲ. ಹಾಗಾಗಿ ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡು, ಚಿನ್ನವನ್ನೆಲ್ಲ ಅಡವಿಟ್ಟು ಕಷ್ಟಪಟ್ಟು 70 ಹೊಸ ದೋಣಿಗಳನ್ನು ಖರೀದಿಸಿದೆವು. ಆದರೆ ಇದೆಲ್ಲವನ್ನೂ ಮೀರಿದ ಲಾಭವಾಗಿದೆ’ ಎಂದು ತಿಳಿಸಿದ್ದಾರೆ.

‘ನನ್ನ ಬಳಿ 300 ಜನರ ತಂಡವಿತ್ತು. 250 ನಾವಿಕರಿದ್ದರು. ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ಹಿಡಿದು ಅವರಿಗೆ ಸ್ನಾನದ ವ್ಯವಸ್ಥೆ ಮಾಡುವವರೆಗೆ ಎಲ್ಲ ಕೆಲಸಗಳನ್ನು ತಂಡ ಯಶಸ್ವಿಯಾಗಿ ನೋಡಿಕೊಂಡಿತು. ಪ್ರತಿ ಹೆಜ್ಜೆಯಲ್ಲೂ ನನ್ನ ಸಹೋದರರು ಜತೆಗಿದ್ದರು’ ಎಂದು ಹೇಳಿದರು. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಟ್ಟಿಂಗ್‌ ಆ್ಯಪ್‌ ಅಕ್ರಮ: ಯುವಿ, ಉತ್ತಪ್ಪ ಆಸ್ತಿ ಜಪ್ತಿ
ಸಂಸತ್‌ ಅಧಿವೇಶನ ಅಂತ್ಯ: ಶೇ.100ಕ್ಕೂ ಹೆಚ್ಚು ಉತ್ಪಾದಕತೆ