ನವದಹಲಿ: ಜಿ20 ಸ್ಪೀಕರ್‌ಗಳ ಸಭೆಯಲ್ಲಿ ಮೆಕ್ಸಿಕೋ ಸಂಸತ್ ಸ್ಪೀಕರ್ ಅನಾ ಲಿಲಿಯಾ ರಿವೆರಾ ಅವರು ಭಾರತ ಹಾಗೂ ಮೆಕ್ಸಿಕೋ ದೇಶದ ಸ್ನೇಹ ಹಾಗೂ ಭ್ರಾತೃತ್ವದ ಸಂಕೇತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ರಿವೆರಾ ಅವರ ತಲೆ ಮೇಲೆ ಕೈಸವರಿ ಆಶೀರ್ವಾದ ಮಾಡಿದರು.