ಸಸ್ಯಾಹಾರದ ಬದಲು ಮಾಂಸಾಹಾರದ ಆಹಾರವನ್ನು ವಿತರಣೆ ಮಾಡಿದ್ದಕ್ಕೆ ಗ್ರಾಹಕರ ಹಕ್ಕು ವೇದಿಕೆಯು ಜೊ಼ಮ್ಯಾಟೋ ಹಾಗೂ ಮೆಕ್‌ಡೊನಾಲ್ಡ್ ಕಂಪನಿಗಳಿಗೆ ಜಂಟಿಯಾಗಿ 1 ಲಕ್ಷ ರು. ದಂಡ ವಿಧಿಸಿದೆ.
ಜೋಧ್‌ಪುರ: ಸಸ್ಯಾಹಾರದ ಬದಲು ಮಾಂಸಾಹಾರದ ಆಹಾರವನ್ನು ವಿತರಣೆ ಮಾಡಿದ್ದಕ್ಕೆ ಗ್ರಾಹಕರ ಹಕ್ಕು ವೇದಿಕೆಯು ಜೊ಼ಮ್ಯಾಟೋ ಹಾಗೂ ಮೆಕ್‌ಡೊನಾಲ್ಡ್ ಕಂಪನಿಗಳಿಗೆ ಜಂಟಿಯಾಗಿ 1 ಲಕ್ಷ ರು. ದಂಡ ವಿಧಿಸಿದೆ. ಇದರ ಜೊತೆಗೆ ನ್ಯಾಯಾಲಯದ ಕಲಾಪ ಖರ್ಚಿಗಾಗಿ 5 ಸಾವಿರ ರು. ಪಾವತಿಸುವಂತೆಯೂ ತಿಳಿಸಿದೆ. ಇದಕ್ಕೆ ಮೇಲ್ಮನವಿ ಸಲ್ಲಿಸಲು ಜೊ಼ಮ್ಯಾಟೊ ಸಂಸ್ಥೆ ಸಿದ್ಧತೆ ನಡೆಸಿದ್ದು ತಮ್ಮದು ಕೇವಲ ವಿತರಣೆ ಮಾಡುವ ಜವಾಬ್ದಾರಿಯಾಗಿದೆಯೇ ಹೊರತು ಆಹಾರ ಪೊಟ್ಟಣದ ಒಳಗಡೆ ಇರುವ ವಸ್ತುವಿಗೆ ತಾವು ಜವಾಬ್ದಾರರಾಗುವುದಿಲ್ಲ ಎಂಬ ಅಂಶವನ್ನು ಪರಿಗಣಿಸಿ ದಂಡದಿಂದ ವಿನಾಯಿತಿ ಕೋರಲು ನಿರ್ಧರಿಸಿದೆ.