6 ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಅಂಚೆ ಕಚೇರಿಗೆ ಆ ಕಟ್ಟಡದ ಮಾಲೀಕ ಬೀಗ ಜಡಿದ ಘಟನೆ ಬಿಹಾರ ಸಾರನ್ ಜಿಲ್ಲೆಯಲ್ಲಿ ನಡೆದಿದೆ.
6 ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ ಎಂಬ ಕಾರಣಕ್ಕೆ ಅಂಚೆ ಕಚೇರಿಗೆ ಆ ಕಟ್ಟಡದ ಮಾಲೀಕ ಬೀಗ ಜಡಿದ ಘಟನೆ ಬಿಹಾರ ಸಾರನ್ ಜಿಲ್ಲೆಯಲ್ಲಿ ನಡೆದಿದೆ. ಅಂಚೆ ಕಚೇರಿ ನಡೆಸಲು ತಿಂಗಳಿಗೆ 18 ಸಾವಿರ ರು.ನಂತೆ ಲಕ್ಷ್ಮಿಕಾಂತ್ ಪಟೇಲ್ ಎಂಬುವವರು ಮನೆಯನ್ನು ಬಾಡಿಗೆಗೆ ನೀಡಿದ್ದರು. ಆದರೆ ಕಳೆದ 6 ತಿಂಗಳಿನಿಂದ ಬಾಡಿಗೆ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಕಚೇರಿಗೆ ಬೀಗ ಹಾಕಿದ್ದಾರೆ. 1985ರಿಂದಲೂ ಈ ಮನೆಯಲ್ಲಿ ಅಂಚೆ ಕಚೇರಿಯನ್ನು ನಡೆಸಲಾಗುತ್ತಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.