ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!

Published : Aug 27, 2025, 04:23 AM IST
bodh gaya

ಸಾರಾಂಶ

ಪಿತೃಗಳಿಗೆ ಪಿಂಡಪ್ರದಾನ ಮಾಡುವ ಹಿಂದೂಗಳ ಪವಿತ್ರ ಪಿತೃಪಕ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಸೆ.6ರಿಂದ 21ರವರೆಗೆ ಗಯಾಜಿ (ಈ ಹಿಂದಿನ ಗಯಾ)ಯಲ್ಲಿ ಇ-ಪಿಂಡದಾನ ಸೇವೆ ಆರಂಭಿಸಲಾಗಿದೆ. ಬಿಹಾರದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಬಿಎಸ್‌ಟಿಡಿಸಿ) ಈ ಯೋಜನೆ ಘೋಷಿಸಿದೆ.

 ಪಟನಾ:  ಪಿತೃಗಳಿಗೆ ಪಿಂಡಪ್ರದಾನ ಮಾಡುವ ಹಿಂದೂಗಳ ಪವಿತ್ರ ಪಿತೃಪಕ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಸೆ.6ರಿಂದ 21ರವರೆಗೆ ಗಯಾಜಿ (ಈ ಹಿಂದಿನ ಗಯಾ)ಯಲ್ಲಿ ಇ-ಪಿಂಡದಾನ ಸೇವೆ ಆರಂಭಿಸಲಾಗಿದೆ. ಬಿಹಾರದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಬಿಎಸ್‌ಟಿಡಿಸಿ) ಈ ಯೋಜನೆ ಘೋಷಿಸಿದೆ.

‘ಇ-ಪಿಂಡದಾನ’ ಸೇವೆಯು ವಿದೇಶದಲ್ಲಿರುವವರು ಹಾಗೂ ಗಯಾಜಿಗೆ ಬಂದು ಪಿಂಡಪ್ರದಾನ ಮಾಡಲು ಸಾಧ್ಯವಾಗದವರಿಗೆ ಪ್ರಯೋಜನವಾಗಲಿದೆ. ಇದಕ್ಕೆ 23000 ರು. ಶುಲ್ಕ ನಿಗದಿಪಡಿಸಲಾಗಿದ್ದು, ವಿಷ್ಣುಪಾದ ದೇವಸ್ಥಾನ, ಅಕ್ಷಯವಾಟ ಹಾಗೂ ಫಲ್ಗು ನದಿತೀರದಲ್ಲಿ ಪುರೋಹಿತರು ಪಿಂಡಪ್ರದಾನ ಮಾಡುತ್ತಾರೆ. ವೈದಿಕ ಮಂತ್ರಗಳ ಜೊತೆ ಶಾಸ್ತ್ರೋಕ್ತವಾಗಿ ಕಾರ್ಯ ಮಾಡಿದ್ದನ್ನು ವಿಡಿಯೋ ಮಾಡಿ ಪೆನ್‌ಡ್ರೈವ್ ಮೂಲಕ ಕಾರ್ಯ ಕೈಗೊಂಡವರಿಗೆ ಕಳಿಸಲಾಗುತ್ತದೆ.

ನೇರವಾಗಿ ಸ್ಥಳಕ್ಕೆ ಬಂದು ಪಿಂಡಪ್ರದಾನ ಮಾಡುವವರಿಗೂ ಅವಕಾಶ ಕಲ್ಪಿಸಲಾಗಿದೆ. 13,450 ರು. ಶುಲ್ಕ ಪಾವತಿಸಿದರೆ 3-ಸ್ಟಾರ್‌ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ, ಪಿಂಡಪ್ರದಾನಕ್ಕೆ ವ್ಯವಸ್ಥೆ ಜೊತೆಗೆ ಪಟನಾ, ನಲಂದಾ, ರಾಜಗೀರ್, ಪುನ್‌ಪುನ್‌ ಮೊದಲಾದ ಕ್ಷೇತ್ರಗಳಿಗೂ ಭಕ್ತರನ್ನು ಕರೆದೊಯ್ಯಲಾಗುತ್ತದೆ. ಬಿಎಸ್‌ಟಿಡಿಸಿಯ ಅಧಿಕೃತ ವೆಬ್ಸೈಟ್‌ನಲ್ಲಿ ಎರಡೂ ಸೇವೆಗಳನ್ನು ಬುಕ್‌ ಮಾಡಲು ಅವಕಾಶವಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ