;Resize=(412,232))
ನಾಸಿಕ್: ಬೀದಿ ನಾಯಿಗಳ ಸಂಖ್ಯೆ, ಹಾವಳಿ ನಿಯಂತ್ರಿಸದ ಸ್ಥಳೀಯಾಡಳಿತ ವಿಫಲವಾಗಿದ್ದಕ್ಕೆ ಆಕ್ರೋಶಗೊಂಡ ನಾಗರಿಕರು ಬೀದಿ ನಾಯಿ ಮರಿಗಳನ್ನು ಪುರಸಭೆ ಕಚೇರಿಗೆ ತಂದು ಅಧಿಕಾರಿಯ ಮುಂದೆ ಬಿಟ್ಟ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ.
ನಿಫಾದ್ ನಗರ ಪಂಚಾಯಿತಿಗೆ ಬಂದ ಶಿವಸೇನೆಯ(ಉದ್ಧವ್ ಬಣ) ಜಿಲ್ಲಾ ಯುವ ವಿಭಾಗದ ಕಾರ್ಯಕರ್ತರು, 2 ಚೀಲಗಳಿಂದ ನಾಯಿಗಳನ್ನು ತೆಗೆದು ಮುಖ್ಯ ಅಧಿಕಾರಿ ಧೀರಜ್ ಭಮ್ರೆ ಅವರ ಮೇಜಿನ ಮೇಲೆ ಬಿಟ್ಟಿದ್ದಾರೆ. ಜೊತೆಗೆ, ‘ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 400 ಬೀದಿ ನಾಯಿಗಳಿದ್ದು, ಪ್ರತೀ ತಿಂಗಳು ಕನಿಷ್ಠ 100 ಜನಕ್ಕೆ ಕಚ್ಚುತ್ತಿವೆ.
ಬೀದಿನಾಯಿಗಳಿಂದ ಆಗುತ್ತಿರುವ ಅನನುಕೂಲ
ಕಳೆದ 6 ತಿಂಗಳಿಂದ ಬೀದಿನಾಯಿಗಳಿಂದ ಆಗುತ್ತಿರುವ ಅನನುಕೂಲಗಳತ್ತ ನಿಮ್ಮ ಗಮನ ಸೆಳೆಯಲು ಯತ್ನಿಸಿದರೂ ನೀವದನ್ನು ನಿರ್ಲಕ್ಷಿಸುತ್ತಿದ್ದಿರಿ’ ಎಂದು ದೂರಿದ್ದಾರೆ. ಜತೆಗೆ, ‘ಈಗಲೂ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಬಾರಿ ಇನ್ನಷ್ಟು ಶ್ವಾನಗಳನ್ನು ತಂದು ಬಿಡುತ್ತೇವೆ. ಜತೆಗೆ ನಾಯಿಗಳಿಂದ ಸಮಸ್ಯೆ ಎದುರಿಸಿದ ಮಹಿಳೆಯರು ಮತ್ತು ಮಕ್ಕಳನ್ನೂ ಕರೆತರುತ್ತೇವೆ’ ಎಂದು ಎಚ್ಚರಿಸಿದ್ದಾರೆ.