ನವದೆಹಲಿ/ಅಮೃತಸರ: ಕರ್ನಾಟಕದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ದಿಲ್ಲಿಯಲ್ಲಿ ಆಪ್ ಸಂಸದೆ ಸ್ವಾತಿ ಮಲಿವಾಲ್ ಅವರ ಚಾರಿತ್ರ್ಯವಧೆ ಪ್ರಕರಣಗಳ ಬೆನ್ನಲ್ಲೇ ಪಂಜಾಬ್‌ನ ಆಪ್ ಸಚಿವ ಬಲ್ಕಾರ್ ಸಿಂಗ್ ವಿರುದ್ಧ ಕಾಮಚೇಷ್ಟೆ ಆರೋಪ ಕೇಳಿಬಂದಿದೆ.
ಕೆಲಸ ಬಯಸಿ ಬಂದ ಮಹಿಳೆಗೆ ಅವರು ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗುವಂತೆ ಸೂಚಿಸಿ, ತಾವೂ ಬೆತ್ತಲಾಗಿ ಹಸ್ತಮೈಥುನ ಮಾಡಿಕೊಂಡ ಆರೋಪ ಈಗ ಲೋಕಸಭೆ ಚುನಾವಣೆಗೂ5 ದಿನ ಮುನ್ನ ಮುನ್ನ ಪಂಜಾಬ್ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದರೊಂದಿಗೆ ಸ್ವಾತಿ ಮೇಲಿನ ದೌರ್ಜನ್ಯ ಆರೋಪದ ಬಳಿಕ ಆಪ್ 2ನೇ ಬಾರಿ ಸಂಕಷ್ಟಕ್ಕೆ ಸಿಲುಕಿದೆ.
ಕೃತ್ಯ ಎಸಗಿದ ಬಲ್ಕಾರ್ ವಜಾಗೆ ಅಕಾಳಿದಳ, ಕಾಂಗ್ರೆಸ್ ಹಾಗೂ ಬಿಜೆಪಿ ಆಗ್ರಹಿಸಿವೆ.
ವಿಡಿಯೋದಲ್ಲೇನಿದೆ?:
ದಿಲ್ಲಿಯ ಬಿಜೆಪಿ ಮುಖಂಡ ತಜಿಂದರ್ ಪಾಲ್ ಬಗ್ಗಾ ವಿಡಿಯೋವೊಂದನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ, ‘ಬಲ್ಕಾರ್ ಸಿಂಗ್ ತಮ್ಮ ಬಳಿ ಕೆಲಸ ಅರಸಿ ಬಂದ ಮಹಿಳೆಯ ಫೋನ್ ನಂಬರ್ ಪಡೆದಿದ್ದರು. ಬಳಿಕ ಆಕೆಯ ಫೋನ್‌ಗೆ ವಿಡಿಯೋ ಕಾಲ್ ಮಾಡಿ, ‘ಕೆಲಸ ಬೇಕು ಎಂದರೆ ಬೆತ್ತಲಾಗು’ ಎಂದರು. ಸಾಲದ್ದಕ್ಕೆ ತಾವೂ ಬೆತ್ತಲಾಗಿ ಆಕೆಯ ಎದುರೇ ಹಸ್ತಮೈಥುನ ಮಾಡಿಕೊಂಡರು. ಈ ಕೃತ್ಯಗಳೆಲ್ಲ ವಿಡಿಯೋದಲ್ಲಿ ರೆಕಾರ್ಡ್ ಆಗಿವೆ’ ಎಂದರು.
ಈ ಪೈಕಿ ಬಲ್ಕಾರ್ ಹಸ್ತಮೈಥುನ ಮಾಡಿಕೊಳ್ಳುವ ಬ್ಲರ್ ಚಿತ್ರಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ ತಜಿಂದರ್, ‘ಇನ್ನೂ ಅಸಹ್ಯ ದೃಶ್ಯಗಳುವ ಇಡಿಯೋದಲ್ಲಿವೆ. ಹೀಗಾಗಿ ಅವನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಲಾಗದು. ಕೃತ್ಯದ ಹೊಣೆ ಹೊತ್ತು ಕೂಡಲೇ ಮುಖ್ಯಮಂತ್ರಿ ಭಗವಂತ ಮಾನ್ ಅವರು ಬಲ್ಕಾರ್ ರನ್ನು ವಜಾ ಮಾಡಬೇಕು. ಇಲ್ಲದೇ ಹೋದರೆ ಲೋಕಸಭೆ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ’ ಎಂದರು.