ಟ್ರಂಪ್‌ಗೆ ಕತಾರ್‌ನಿಂದ ₹3400 ಕೋಟಿ ಮೌಲ್ಯದ ವಿಮಾನ ಗಿಫ್ಟ್‌

KannadaprabhaNewsNetwork |  
Published : May 13, 2025, 01:29 AM ISTUpdated : May 13, 2025, 04:33 AM IST
ಟ್ರಂಪ್‌ | Kannada Prabha

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಶ್ರೀಮಂತ ಕೊಲ್ಲಿ ದೇಶವಾದ ಕತಾರ್‌ 3400 ಕೋಟಿ ಮೌಲ್ಯದ ಐಷಾರಾಮಿ ವಿಮಾನವೊಂದನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರದ ಟ್ರಂಪ್ ಮಧ್ಯಪ್ರಾಚ್ಯ ದೇಶಗಳ ಪ್ರವಾಸದ ವೇಳೆ ಈ ವಿಮಾನ ಹಸ್ತಾಂತರಿಸುವ ಸಾಧ್ಯತೆ ಇದೆ.

ಏರ್‌ಫೋರ್ಸ್‌ ಒನ್‌ ಹಳೆಯದಾದ ಕಾರಣ ಉಡುಗೊರೆ

ಟ್ರಂಪ್ ಅವಧಿ ಬಳಿಕ ಮ್ಯೂಸಿಯಂ ಸೇರಲಿದೆ ಅರಮನೆ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಶ್ರೀಮಂತ ಕೊಲ್ಲಿ ದೇಶವಾದ ಕತಾರ್‌ 3400 ಕೋಟಿ ಮೌಲ್ಯದ ಐಷಾರಾಮಿ ವಿಮಾನವೊಂದನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರದ ಟ್ರಂಪ್ ಮಧ್ಯಪ್ರಾಚ್ಯ ದೇಶಗಳ ಪ್ರವಾಸದ ವೇಳೆ ಈ ವಿಮಾನ ಹಸ್ತಾಂತರಿಸುವ ಸಾಧ್ಯತೆ ಇದೆ.

ಉಡುಗೊರೆ ಏಕೆ?:

ಹಾಲಿ ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್‌ 1 ಎಂದು ಕರೆಯುವ ವಿಮಾನ ಬಹಳ ಹಳೆಯದು. ಹೀಗಾಗಿ ಹೊಸ ವಿಮಾನ ಖರೀದಿಗೆ ಟ್ರಂಪ್‌ ತಾವು ಮೊದಲ ಅವಧಿಗೆ ಅಧ್ಯಕ್ಷರಾಗಿದ್ದಾಗಲೇ ಬೇಡಿಕೆ ಸಲ್ಲಿಸಿದ್ದರು. ಆದರೆ ಅದನ್ನು ಶ್ವೇತಭವನದ ಬೇಡಿಕೆ ಅನ್ವಯ ಸಿದ್ಧಪಡಿಸಲು 2 ವಿಮಾನಗಳಿಗೆ 17000 ಕೋಟಿ ರು.ವೆಚ್ಚದ ಅಂದಾಜು ಮಾಡಲಾಗಿತ್ತು. ಆದರೆ ಇದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಖರೀದಿ ವಿಳಂಬವಾಗಿತ್ತು. ಕೊನೆಗೆ ಎಲ್ಲಾ ಸರಿಯಾಗಿ ಬೇಡಿಕೆ ಸಲ್ಲಿಸಲಾಗಿದೆಯಾದರೂ ಅದು ಪೂರೈಕೆಯಾಗುವುದು 2029ರ ಹೊತ್ತಿಗೆ.

ಆದರೆ ಇನ್ನೂ 4 ವರ್ಷ ಹಳೆಯ ವಿಮಾನ ಬಳಸಲು ಟ್ರಂಪ್‌ ಸಿದ್ಧರಿಲ್ಲ. ಹೀಗಾಗಿ ದುಬೈ ದೊರೆಗಳು ತಮ್ಮ ಬಳಕೆಗೆಂದು ಖರೀದಿ ಮಾಡಿದ್ದ 747-8 ಬೋಯಿಂಗ್‌ ವಿಮಾನ ಉಡುಗೊರೆ ನೀಡಲು ಮುಂದಾಗಿದ್ದಾರೆ. ಬಳಿಕ ಈ ವಿಮಾನವನ್ನು ಅಮೆರಿಕ ಅಧ್ಯಕ್ಷರ ಬೇಡಿಕೆಗೆ ಅನ್ವಯ ಮರು ವಿನ್ಯಾಸಗೊಳಿಸಲಾಗುತ್ತದೆ ಎನ್ನಲಾಗಿದೆ.

ಹಾರುವ ಅರಮನೆ:

ಹಾಲಿ ಕತಾರ್‌ ಬಳಿ ಇರುವ ವಿಮಾನವನ್ನು ಫ್ಲೈಯಿಂಗ್ ಪ್ಯಾಲೆಸ್‌ ಅಥವಾ ಹಾರುವ ಅರಮನೆ ಎಂದು ಕರೆಯಲಾಗುತ್ತದೆ, ಇದರಲ್ಲಿ ಅತ್ಯಾಧುನಿಕ ಸ್ನಾನಗೃಹಗಳು, ಖಾಸಗಿ ಮಲಗುವ ಕೋಣೆಗಳು. ಭವ್ಯವಾದ ಮೆಟ್ಟಿಲುಗಳಿಂದ ಕೂಡಿದ ಒಳಾಂಗಣವನ್ನು ಹೊಂದಿದೆ. ಇದನ್ನು ಆರಂಭದಲ್ಲಿ ಕತಾರ್‌ ರಾಜಮನೆತದವರು ಬಳಸುತ್ತಿದ್ದರು. ಆ ಬಳಿಕ ಟರ್ಕಿ ಇದನ್ನು ಬಳಸುತ್ತಿದ್ದರು.

13 ವರ್ಷ ಹಳೆಯದಾದ ಕತಾರ್‌ನ ಈ ವಿಮಾನವನ್ನು ಟ್ರಂಪ್ ಅವಧಿ ಮುಗಿದ ನಂತರ ಅಧ್ಯಕ್ಷೀಯ ಗ್ರಂಥಾಲಯ ಪ್ರತಿಷ್ಠಾನಕ್ಕೆ ಸ್ಥಳಾಂತರಿಸಲಾಗುತ್ತದೆ.

ಏರ್‌ಪೋರ್ಸ್‌ ಒನ್ ವಿಶೇಷತೆ:

ಏರ್‌ಪೋರ್ಸ್‌ ಒನ್ ಅಮೆರಿಕದ ಅಧ್ಯಕ್ಷರು ಬಳಕೆ ಮಾಡುವ ವಿಮಾನ. ಇದನ್ನು ಹಾರಾಡುವ ಶ್ವೇತ ಭವನ ಎಂದು ಕರೆಯುತ್ತಾರೆ. ಈ ವಿಮಾನದಲ್ಲಿ ಅಮೆರಿಕದ ಸಂಸತ್‌ ಶ್ವೇತ ಭವನದಲ್ಲಿ ಇರುವ ರೀತಿಯಲ್ಲಿಯೇ ಎಲ್ಲಾ ಸೌಲಭ್ಯಗಳು ಇರುತ್ತದೆ. ಈ ವಿಮಾನ 1990-91ರಿಂದಲೂ ಬಳಕೆಯಲ್ಲಿದೆ. ಇಂಧನ ಇಲ್ಲದೆಯೂ 20 ಗಂಟೆ ಹಾರಾಡುವ ಸಾಮಾರ್ಥ್ಯ ಹೊಂದಿರುವ ಅಧ್ಯಕ್ಷೀಯ ವಿಮಾನದಲ್ಲಿ ಅಧ್ಯಕ್ಷರಿಗೆ ಖಾಸಗಿ ಕಚೇರಿ, ವಿಶ್ರಾಂತಿಗೆ ಕೊಠಡಿ, ಸೆಮಿನಾರ್ ಹಾಲ್ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ