ಎಂಡೋಸ್ಕೋಪಿಕ್‌ ಕ್ಯಾಮೆರಾ ಬಳಸಿ ಪ್ರಶ್ನೆಪತ್ರಿಕೆ ಸೋರಿಕೆ!

Published : Aug 23, 2026, 08:48 AM IST
neet question paper leak

ಸಾರಾಂಶ

ಛತ್ತೀಸ್‌ಗಢದ ದುರ್ಗ್‌ ಜಿಲ್ಲೆಯ ಸರ್ಕಾರಿ ಇಂದಿರಾ ಗಾಂಧಿ ಕೃಷಿ ವಿವಿಯ ಬಿಎಸ್ಸಿ 2ನೇ ವರ್ಷದ ಕೀಟಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆಯನ್ನು ‘ಎಂಡೋಸ್ಕೋಪಿಕ್‌ ಕ್ಯಾಮೆರಾ’ ಬಳಸಿ ಸೋರಿಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

 ರಾಯ್‌ಪುರ : ಛತ್ತೀಸ್‌ಗಢದ ದುರ್ಗ್‌ ಜಿಲ್ಲೆಯ ಸರ್ಕಾರಿ ಇಂದಿರಾ ಗಾಂಧಿ ಕೃಷಿ ವಿವಿಯ ಬಿಎಸ್ಸಿ 2ನೇ ವರ್ಷದ ಕೀಟಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆಯನ್ನು ‘ಎಂಡೋಸ್ಕೋಪಿಕ್‌ ಕ್ಯಾಮೆರಾ’ ಬಳಸಿ ಸೋರಿಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿವಿ ಅಧೀನದ ಕಾಲೇಜೊಂದರ ಪ್ರೊಫೆಸರ್‌ ಹಾಗೂ ಐವರು ವಿದ್ಯಾರ್ಥಿಗಳನ್ನು ಶನಿವಾರ ಬಂಧಿಸಲಾಗಿದೆ.

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಜೆನ್‌ಝೀ ಪ್ರತಿಭಟನೆ ಹಾಗೂ ಜೆಪಿಎಸ್ಸಿ ನೇಮಕಾತಿ ಅಕ್ರಮದ ಬಗ್ಗೆ ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದ ನಡುವೆಯೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಶ್ನೆಪತ್ರಿಕೆ ಇದ್ದ ಸೀಲ್‌ ಹಾಕಲಾದ ಎನ್ವೆಲಪ್‌ಗೆ ಚಿಕ್ಕದಾಗಿ ರಂಧ್ರ ಮಾಡಿ ಅತ್ಯಂತ ಸಣ್ಣದಾದ ಎಂಡೋಸ್ಕೋಪಿಕ್‌ ಕ್ಯಾಮೆರಾ ತೂರಿಸಿ ಈ ಕೃತ್ಯ ಎಸಗಲಾಗಿದೆ. ಪರೀಕ್ಷೆಯ ದಿನ ಆ.20ರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಪರೀಕ್ಷೆ ರದ್ದು ಮಾಡಲಾಗಿದೆ. ದೂರು ದಾಖಲಾದ 36 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಸೈಬರ್‌ ಪೊಲೀಸರು ಮೊದಲಿಗೆ ವಿದ್ಯಾರ್ಥಿ ಅನುಜ್‌ ಮಿಂಜ್‌ನನ್ನು ಬಂಧಿಸಿದ್ದು, ಬ‍ಳಿಕ ಇದರ ಮಾಸ್ಟರ್‌ಮೈಂಡ್‌ ದುರ್ಗ್‌ನ ಭಾರತಿ ಕೃಷಿ ಕಾಲೇಜಿನ ಪ್ರೊಫೆಸರ್‌ ಯೋಗೇಶ್‌ ಸೋನ್‌ಕೇಸರಿಯಾ ಹಾಗೂ ಇತರೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರೆದಿದೆ.

ಹೇಗೆ ಅಕ್ರಮ?:

ರಾಯ್ಪುರದ ಜೋರಾದಲ್ಲಿರುವ ಕೃಷಿ ಕಾಲೇಜಿನ ಅಧೀನದಲ್ಲಿರುವ ಕೃಷಿ ಕಾಲೇಜುಗಳಲ್ಲಿ ವಿವಿಧ ಪರೀಕ್ಷೆಗಳು ನಡೆದಿದ್ದವು. ಆ.17ರಂದು, ತಮ್ಮ ಭಾರತಿ ಕೃಷಿ ಕಾಲೇಜಿನಲ್ಲಿ ಮುಗಿದ ಪರೀಕ್ಷೆಗಳ ಉತ್ತರ ಪ್ರತ್ರಿಕೆಗಳನ್ನು ನೀಡಲು ಪ್ರೊ। ಯೋಗೇಶ್‌, ವಿವಿಗೆ ಹೋಗಿದ್ದರು. ವಾಪಸ್‌ ಬರುವಾಗ ಮುಂಬರುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಪಡೆದಿದ್ದರು.

ಬಹುತೇಕ ಪ್ರಶ್ನೆ ಪತ್ರಿಕೆಗಳನ್ನು ತಮ್ಮ ಕಾಲೇಜಿಗೆ ಕೊಂಡೊಯ್ದ ಅವರು, ಸೀಲ್‌ ಮಾಡಲಾದ ಕೀಟಶಾಸ್ತ್ರಕ್ಕೆ ಸಂಬಂಧಿಸಿದ 1 ಪ್ರಶ್ನೆಪತ್ರಿಕೆಯ ಬಂಡಲ್‌ ಅನ್ನು ಮಾತ್ರ ಮನೆಗೆ ತೆಗೆದುಕೊಂಡು ಹೋಗಿದ್ದರು. ಬಳಿಕ ಪ್ರಶ್ನೆ ಪತ್ರಿಕೆ ಇದ್ದ ಎನ್ವೆಲಪ್‌ಗೆ ಸಣ್ಣದೊಂದು ರಂಧ್ರ ಮಾಡಿ ಅದರೊಳಗೆ ಅತಿ ಚಿಕ್ಕದಾದ ಎಂಡ್ಕೋಸ್ಕೋಪಿಕ್‌ ಕ್ಯಾಮೆರಾ ತೂರಿಸಿ ಪ್ರಶ್ನೆಪತ್ರಿಕೆಯ ಫೋಟೋ, ವಿಡಿಯೋ ಸೆರೆ ಹಿಡಿದಿದ್ದರು. ತರುವಾಯ ಅದನ್ನು 11,000 ರು.ಗೆ ಅಜಯ್‌ ನಾಯಕ್‌ ಮತ್ತು ಇತರೆ ಇಬ್ಬರು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿದ್ದರು. ನಾಯಕ್‌ ಅದನ್ನು ಇನ್ನೂ ನಾಲ್ವರ ಜತೆ ಹಂಚಿಕೊಂಡಿದ್ದ.

ಸೋರಿಕೆ ಹೇಗೆ?

- ಕಾಲೇಜಿಗೆ ಪ್ರಶ್ನೆಪತ್ರಿಕೆಯ ಬಂಡಲ್‌ ನೀಡಿ, ಒಂದು ಬಂಡಲ್ ಮನೆಗೆ ಒಯ್ದಿದ್ದ ಪ್ರಾಧ್ಯಾಪಕ

- ಬಂಡಲ್‌ಗೆ ಸಣ್ಣ ರಂಧ್ರ ಮಾಡಿ ಎಂಡೋಸ್ಕೋಪಿಕ್‌ ಕ್ಯಾಮೆರಾ ತೂರಿಸಿ ಪ್ರಶ್ನೆಗಳ ಚಿತ್ರೀಕರಣ

- ಬಳಿಕ ಪ್ರಶ್ನೆಗಳನ್ನು ತಯಾರಿಸಿ 11 ಸಾವಿರ ರು.ಗೆ ಮೂವರಿಗೆ ಮಾರಾಟ ಮಾಡಿದ್ದ ಪ್ರೊಫೆಸರ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜೆನ್‌ಝೀ ಓಲೈಕೆಗೆ ಬಿಜೆಪಿಯಿಂದ ಈಗ ಹೊಸ ತಂಡ ರಚನೆ
ಠಾಣೆ ಮುಂದೆ ಸತತ 7 ಗಂಟೆ ರಾಗಾ ಧರಣಿ!