ತೆಲಂಗಾಣ ಸಿಎಂ ಅಮೆರಿಕ ಪ್ರವಾಸಕ್ಕೆ ಕೇಂದ್ರದ ತಡೆ

KannadaprabhaNewsNetwork |  
Published : Aug 22, 2026, 02:45 AM IST
Revant Reddy

ಸಾರಾಂಶ

ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ್ದು, ಅವರ ಪ್ರಸ್ತಾವಿತ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಲಂಡನ್ ಪ್ರವಾಸದಲ್ಲಿರುವ ಅವರು, ತಮ್ಮ ವೇಳಾಪಟ್ಟಿಯನ್ನು ಕಡಿತಗೊಳಿಸಿ ಆ.23ರಂದು ಹೈದರಾಬಾದ್‌ಗೆ ಹಿಂತಿರುಗಲಿದ್ದಾರೆ.

ಹೈದರಾಬಾದ್/ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ್ದು, ಅವರ ಪ್ರಸ್ತಾವಿತ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಲಂಡನ್ ಪ್ರವಾಸದಲ್ಲಿರುವ ಅವರು, ತಮ್ಮ ವೇಳಾಪಟ್ಟಿಯನ್ನು ಕಡಿತಗೊಳಿಸಿ ಆ.23ರಂದು ಹೈದರಾಬಾದ್‌ಗೆ ಹಿಂತಿರುಗಲಿದ್ದಾರೆ.

ಆ.20ರಿಂದ 10 ದಿನಗಳ ಬ್ರಿಟನ್‌ ಮತ್ತು ಅಮೆರಿಕ ಪ್ರವಾಸ

ಆ.20ರಿಂದ 10 ದಿನಗಳ ಬ್ರಿಟನ್‌ ಮತ್ತು ಅಮೆರಿಕ ಪ್ರವಾಸಕ್ಕಾಗಿ ತೆಲಂಗಾಣ ಸರ್ಕಾರ ಕೇಂದ್ರದ ಅನುಮತಿ ಕೋರಿತ್ತು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬ್ರಿಟನ್ ಪ್ರವಾಸಕ್ಕೆ ಮಾತ್ರ ಅನುಮೋದನೆ ನೀಡಿ, ಅಮೆರಿಕ ಭೇಟಿಗೆ ತಡೆ ನೀಡಿದೆ.

ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯ

ಈ ಕುರಿತು ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಮುಖ್ಯಮಂತ್ರಿಗಳು ಅಥವಾ ಇತರ ಉನ್ನತ ಅಧಿಕಾರಿಗಳ ವಿದೇಶಿ ಪ್ರವಾಸಕ್ಕೆ ಅನುಮತಿ ನೀಡುವ ಮುನ್ನ ವಿದೇಶಾಂಗ ಸಚಿವಾಲಯವು ಪರಿಶೀಲಿಸುತ್ತದೆ. ನಿಗದಿತ ಕಾರ್ಯಕ್ರಮವು ಅವರು ಹೊಂದಿರುವ ಹುದ್ದೆಗೆ ಮತ್ತು ಪ್ರವಾಸದ ಉದ್ದೇಶಕ್ಕೆ ಸೂಕ್ತವಾಗಿರಬೇಕು. ಅಮೆರಿಕ ಪ್ರವಾಸದ ವಿಚಾರದಲ್ಲಿ ಪ್ರಸ್ತಾವಿತ ಕಾರ್ಯಕ್ರಮವು ಸೂಕ್ತವಾಗಿ ಕಂಡುಬರದ ಕಾರಣ ಅನುಮತಿ ನಿರಾಕರಿಸಲಾಗಿದೆ’ ಎಂದಿದ್ದಾರೆ.

ರೇವಂತ್‌ ಬೇಸರ: ಕೇಂದ್ರದ ಈ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ರೇವಂತ್, ‘ಕೇಂದ್ರದ ಹೊಸ ಶಿಕ್ಷಣ ನೀತಿಯ ಭಾಗವಾಗಿ ಹಾರ್ವರ್ಡ್, ಎಂಐಟಿ ಮತ್ತು ಆಕ್ಸ್‌ಫರ್ಡ್‌ನಂತಹ ವಿಶ್ವದ ಅತ್ಯುತ್ತಮ ವಿವಿಗಳನ್ನು ತೆಲಂಗಾಣಕ್ಕೆ ತರುವುದು ಈ ಪ್ರವಾಸದ ಮುಖ್ಯ ಉದ್ದೇಶವಾಗಿತ್ತು. ದೇಶನಿರ್ಮಾಣ ಮತ್ತು ಯುವಜನರ ಭವಿಷ್ಯದ ವಿಷಯದಲ್ಲಿ ರಾಜಕೀಯವನ್ನು ಮೀರಬೇಕಿದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಂಡೋಸ್ಕೋಪಿಕ್‌ ಕ್ಯಾಮೆರಾ ಬಳಸಿ ಪ್ರಶ್ನೆಪತ್ರಿಕೆ ಸೋರಿಕೆ!
ಜೆನ್‌ಝೀ ಓಲೈಕೆಗೆ ಬಿಜೆಪಿಯಿಂದ ಈಗ ಹೊಸ ತಂಡ ರಚನೆ