ಕ।ಖುರೇಶಿ, ವ್ಯೋಮಿಕಾ ಸುದ್ದಿಗೋಷ್ಠಿ ‘ಬೂಟಾಟಿಕೆ’: ಎಂದ ಪ್ರೊಫೆಸರ್‌ ಅರೆಸ್ಟ್‌

Follow Us

ಸಾರಾಂಶ

ಕರ್ನಲ್‌ ಸೋಫಿಯಾ ಖುರೇಶಿ ಮತ್ತು ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹರ್ಯಾಣದ ಅಶೋಕ ವಿವಿಯ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ.

ಚಂಡೀಗಢ: ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ನ ಬಗ್ಗೆ ಸರಣಿ ಪತ್ರಿಕಾಗೋಷ್ಠಿ ನಡೆಸಿದ್ದ ಕರ್ನಲ್‌ ಸೋಫಿಯಾ ಖುರೇಶಿ ಮತ್ತು ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹರ್ಯಾಣದ ಅಶೋಕ ವಿವಿಯ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ. 

ಬಂಧಿತ ಪ್ರಾಧ್ಯಾಪಕ ಅಲಿ ಖಾನ್‌ ಮಹ್ಮುದಾಬಾದ್‌ ಅವರು ಚಂಡೀಗಢದಲ್ಲಿನ ಅಶೋಕಾ ವಿವಿಯಲ್ಲಿ ರಾಜಕೀಯ ಶಾಸ್ತ್ರದ ಮುಖ್ಯಸ್ಥರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ಪತ್ರಿಕಾಗೋಷ್ಠಿ ಕೇವಲ ಬೂಟಾಟಿಕೆ. ಹೇಳುವುದೆಲ್ಲವೂ ಜಾರಿಯಾಗಬೇಕು’ ಎಂದು ಪೋಸ್ಟ್‌ ಹಾಕಿದ್ದರು. ಇದರ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಹರ್ಯಾಣ ಮಹಿಳಾ ಆಯೋಗ ಸಹ ಅಲಿ ಖಾನ್‌ಗೆ ಸಮನ್ಸ್‌ ನೀಡಿದೆ.

Read more Articles on