ಭೂಮಿಗಾಗಿ ಲಂಚ ಪ್ರಕರಣ: ರಾಬ್ಡಿದೇವಿ, ಮಿಸಾಗೆ ಸಮನ್ಸ್‌

KannadaprabhaNewsNetwork |  
Published : Jan 28, 2024, 01:15 AM IST
ಲಾಲು ಪ್ರಸಾದ್‌ ಯಾದವ್‌ | Kannada Prabha

ಸಾರಾಂಶ

ಲಾಲು ಪ್ರಸಾದ್‌ ಯಾದವ್‌ ಅವರು ರೈಲ್ವೆ ಸಚಿವರಾಗಿದ್ದ ವೇಳೆ ಉದ್ಯೋಗಕ್ಕಾಗಿ ಜಾಗವನ್ನು ಲಂಚ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬ್ಡಿದೇವಿ ಮತ್ತು ಮಿಸಾ ಭಾರತಿಗೆ ದೆಹಲಿ ಕೋರ್ಟ್‌ ವಿಚಾರಣೆಗೆ ಹಾಜರಾಗುವಮತೆ ಸಮನ್ಸ್‌ ನೀಡಿದೆ.

ನವದೆಹಲಿ: ಲಾಲು ಯಾದವ್‌ ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ನೇಮಕಾತಿಯಲ್ಲಿ ಭೂಮಿ ರೂಪದಲ್ಲಿ ಲಂಚ ಪಡೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಹಾಗೂ ಅವರ ಪುತ್ರಿ ಮಿಸಾ ಭಾರತಿ ಅವರಿಗೆ ದೆಹಲಿಯ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಫೆ.9ಕ್ಕೆ ಕೋರ್ಟ್‌ ಎದುರು ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ.

ರಾಬ್ಡಿದೇವಿ, ಮಿಸಾ ಭಾರತಿ ಮತ್ತು ಹೇಮಾ ಯಾದವ್‌ಗೆ ಸಮನ್ಸ್‌ ನೀಡಲಾಗಿದ್ದು, ಈ ಮೂವರನ್ನು ವಿಚಾರಣೆ ನಡೆಸಲು ಸಾಕಷ್ಟು ಕಾರಣಗಳಿವೆ ಎಂದು ಕೋರ್ಟ್‌ ಹೇಳಿದೆ.

ಅಲ್ಲದೇ ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ಅಮಿತ್‌ ಕತ್ಯಾಲ್‌ರನ್ನು ಹಾಜರು ಪಡಿಸುವಂತೆ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆ್ಯಂಥ್ರೋಪಿಕ್‌ ಎಐನಿಂದ ವಿಶ್ವ ಟೆಕ್‌ ಲೋಕದಲ್ಲಿ ಬಿರುಗಾಳಿ!
ಕೇರಳ ಅಸೆಂಬ್ಲಿಯಲ್ಲೂ ಈಗ ‘ಗೋ ರಾಮ್‌ ಜಿ’ ನಿರ್ಣಯ