ಅಮೋನಿಯಾ ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತಪಟ್ಟು, ಹಲವರು ಗಂಭೀರವಾಗಿ ಅಸ್ವಸ್ಥರಾಗಿರುವ ದುರದೃಷ್ಟಕರ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕನ್ನಿಗೈಪೈರ್‌ನಲ್ಲಿನ ಸೇಂಟ್ ಪೀಟರ್ಸ್ ಪಾಲ್ ಸೀಫುಡ್ ಎಕ್ಸ್‌ಪೋರ್ಟ್ಸ್ ಕಂಪನಿಯಲ್ಲಿ ಭಾನುವಾರ ನಡೆದಿದೆ.
ಚೆನ್ನೈ: ಅಮೋನಿಯಾ ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತಪಟ್ಟು, ಹಲವರು ಗಂಭೀರವಾಗಿ ಅಸ್ವಸ್ಥರಾಗಿರುವ ದುರದೃಷ್ಟಕರ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕನ್ನಿಗೈಪೈರ್‌ನಲ್ಲಿನ ಸೇಂಟ್ ಪೀಟರ್ಸ್ ಪಾಲ್ ಸೀಫುಡ್ ಎಕ್ಸ್‌ಪೋರ್ಟ್ಸ್ ಕಂಪನಿಯಲ್ಲಿ ಭಾನುವಾರ ನಡೆದಿದೆ.
ಅಸ್ಸಾಂ, ಒಡಿಶಾ, ಜಾರ್ಖಂಡ್ ರಾಜ್ಯಗಳಿಂದ ಬಂದ ಕಾರ್ಮಿಕರು
ಅಸ್ಸಾಂ, ಒಡಿಶಾ, ಜಾರ್ಖಂಡ್ ರಾಜ್ಯಗಳಿಂದ ಬಂದ ಸುಮಾರು 120 ಮಂದಿ ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ತಂಗಿದ್ದರು. ಏಕೆಂದರೆ ಕಂಪನಿಯು ಅವರಿಗೆ ಕ್ಯಾಂಪಸ್ ಒಳಗೇ ವಸತಿ ಸೌಕರ್ಯ ಒದಗಿಸಿತ್ತು.
ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವ
ಈ ವೇಳೆ ಸಮುದ್ರಾಹಾರ ಸಂಸ್ಕರಣಾ ಘಟಕದಿಂದ ಅಮೋನಿಯಾ ಸೋರಿಕೆಯಾಗಿ ಕಟ್ಟಡದ ತುಂಬ ಹರಡಿದೆ. ಇದರಿಂದ ಹಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ, ಕೆಲವರಿಗೆ ಬಾಯಿ ಮತ್ತು ಮೂಗಿನಿಂದ ರಕ್ತಸ್ರಾವವಾಗಿದೆ. ಪರಿಣಾಮ ಕಾರ್ಮಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಇತರ 9 ಜನರನ್ನು ಖಾಸಗಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್‌ಗಳಲ್ಲಿ ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು.
ರಕ್ಷಣಾ ತಂಡಗಳಿಂದ ಹರಸಾಹಸ: ಪೊಲೀಸ್, ಅಗ್ನಿಶಾಮಕ, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಜಿಲ್ಲಾಡಳಿತದ ಕೋರಿಕೆಯ ಮೇರೆಗೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತನ್ನ ವಿಶೇಷ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು (ಸಿಬಿಆರ್‌ಎನ್) ಪ್ರತಿಕ್ರಿಯೆ ತಂಡವನ್ನು ಸ್ಥಳದಲ್ಲಿ ನಿಯೋಜಿಸಿತು. ರಕ್ಷಣಾ ಪ್ರಯತ್ನಗಳಿಗೆ ಸಹಾಯ ಮಾಡಲು ಅನಿಲ ಪತ್ತೆ ಸಾಧನ, ವೈಯಕ್ತಿಕ ರಕ್ಷಣಾ ಸಾಧನ ಮತ್ತು ಇತರ ವಿಶೇಷ ಸಾಧನಗಳನ್ನು ಹೊಂದಿದ 30 ಸದಸ್ಯರ ತಂಡವನ್ನು ನಿಯೋಜಿಸಿ, ಸಂತ್ರಸ್ತರ ರಕ್ಷಣೆಗೆ ಹರಸಾಹಸ ಮಾಡಲಾಯಿತು.