ಜನರ ಚುಚ್ಚು ಮಾತಿಗೆ ಬೇಸತ್ತು ಟೆನ್ನಿಸ್‌ ಆಟಗಾರ್ತಿ ಕೊಂದ ತಂದೆ

KannadaprabhaNewsNetwork |  
Published : Jul 11, 2025, 11:48 PM ISTUpdated : Jul 12, 2025, 04:42 AM IST
ರಾಧಿಕಾ  | Kannada Prabha

ಸಾರಾಂಶ

ಹರ್ಯಾಣದ ಗುರುಗ್ರಾಮದಲ್ಲಿ ತಂದೆಯಿಂದಲೇ ಹತ್ಯೆಯಾದ ರಾಷ್ಟ್ರ ಮಟ್ಟದ ಟೆನ್ನಿಸ್‌ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಕೌಟುಂಬಿಕ ಕಲಹವೇ ಮುಖ್ಯ ಕಾರಣ ಎನ್ನಲಾಗುತ್ತಿದ್ದು, ಮಗಳ ರೀಲ್ಸ್ ಹುಚ್ಚು, ಜನರ ಚುಚ್ಚು ಮಾತು ತಂದೆ ದೀಪಕ್‌ ಯಾದವ್‌ನನ್ನು ಕೆರಳಿಸಿತ್ತು.  

ಗುರುಗ್ರಾಮ: ಹರ್ಯಾಣದ ಗುರುಗ್ರಾಮದಲ್ಲಿ ತಂದೆಯಿಂದಲೇ ಹತ್ಯೆಯಾದ ರಾಷ್ಟ್ರ ಮಟ್ಟದ ಟೆನ್ನಿಸ್‌ ಆಟಗಾರ್ತಿ ರಾಧಿಕಾ ಯಾದವ್ ಕೊಲೆಗೆ ಕೌಟುಂಬಿಕ ಕಲಹವೇ ಮುಖ್ಯ ಕಾರಣ ಎನ್ನಲಾಗುತ್ತಿದ್ದು, ಮಗಳ ರೀಲ್ಸ್ ಹುಚ್ಚು, ಜನರ ಚುಚ್ಚು ಮಾತು ತಂದೆ ದೀಪಕ್‌ ಯಾದವ್‌ನನ್ನು ಕೆರಳಿಸಿತ್ತು. ಹೀಗಾಗಿ ಕಳೆದ 3 ದಿನದಿಂದ ಮಗಳ ಮೇಲೆ ಕುದಿಯುತ್ತಿದ್ದ ಅವರು ಆಕೆಯನ್ನು ಕೊಂದರು ಎಂದು ಗೊತ್ತಾಗಿದೆ.

ಇದೇ ವೇಳೆ ಪೋಸ್ಟ್‌ ಮಾರ್ಟಂ ವರದಿಯಲ್ಲಿ ಆಕೆಯ ಮೇಲೆ ತಂದೆ ದೀಪಕ್ 4 ಗುಂಡು ಹಾರಿಸಿದ್ದು ಗೊತ್ತಾಗಿದೆ.

ಮಾಜಿ ಬ್ಯಾಂಕ್ ಉದ್ಯೋಗಿ ದೀಪಕ್‌ ಹಲವು ಆಸ್ತಿ ಹೊಂದಿದ್ದರು. ಅದರಿಂದಲೇ ತಿಂಗಳಿಗೆ 15- 17 ಲಕ್ಷ ರು. ಆದಾಯ ಬರುತ್ತಿತ್ತು. ಆಕೆಯ ಟೆನ್ನಿಸ್‌ ಅಕಾಡೆಮಿಗೆ 2.5 ಕೋಟಿ ರು. ಖರ್ಚು ಮಾಡಿದ್ದರು. ಈ ನಡುವೆ ರಾಧಿಕಾ ಗಾಯದ ಬಳಿಕ ಟೆನ್ನಿಸ್‌ ಕಡೆಗೆ ಗಮನ ನೀಡಿರಲಿಲ್ಲ. ರೀಲ್ಸ್ ಗೀಳಿಗೆ ಬಿದ್ದು ಇನ್‌ಫ್ಲೂಯೆನ್ಸರ್‌ ಎಲ್ವಿಶ್‌ ಯಾದವ್ ರೀತಿ ಜನಪ್ರಿಯತೆ ಪಡೆವ ಕನಸು ಕಂಡಿದ್ದರು. ತಂದೆ ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಜೊತೆಗೆ ಮಗಳ ಟೆನ್ನಿಸ್‌ ಅಕಾಡೆಮಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ ಎಂದು ಊರಿನವರು ನಿಂದಿಸುತ್ತಿದ್ದರು. ಅಕಾಡೆಮಿ ಮುಚ್ಚು ಎಂದರೂ ಆಕೆ ಕೇಳಿರಲಿಲ್ಲ, ಇದು ತಂದೆಯನ್ನು ಕೆರಳಿಸಿತ್ತು.

ಹೀಗಾಗಿಯೇ ತಾನು ಆಕೆಯನ್ನು ಕೊಂದೆ ಎಂದು ದೀಪಕ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಿಟ್ಟು?

ಈ ನಡುವೆ ‘ಕರ್ವಾನ್‌’ ಎನ್ನುವ ಮ್ಯೂಸಿಕ್‌ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ತಂದೆ ಆಕ್ಷೇಪಿಸಿ, ವಿಡಿಯೋ ಅಳಿಸು ವಂತೆ ಕೇಳಿದ್ದರು. ಅದು ಆಗಿರಲಿಲ್ಲ. ಈ ವಿಚಾರಗಳೇ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು ರಾಧಿಕಾ ಯಾದವ್‌ಗೆ ದೀಪಕ್‌ ನಾಲ್ಕು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.

PREV
Read more Articles on