ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ತನ್ನ ವಾಗ್ದಾಳಿ ಮುಂದುವರೆಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಮತದಾರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಚುನಾವಣಾ ಆಯೋಗ ಮತಗಳನ್ನು ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ.
ಪರಿಷ್ಕರಣೆ ಹೆಸರಿನಲ್ಲಿ ಕಳ್ಳತನದ ಕೆಲಸ ಮಾಡುತ್ತಿದೆ. ಅದನ್ನು ಬಹಿರಂಗಪಡಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿದೆ. ಆಯೋಗ ಈಗಲೂ ಚುನಾವಣಾ ಆಯೋಗವಾಗಿ ಉಳಿದಿದೆಯೇ ಅಥವಾ ಅಥವಾ ಸಂಪೂರ್ಣವಾಗಿ ಬಿಜೆಪಿಯ ಚುನಾವಣಾ ಚೋರಿ(ಕಳ್ಳತನ) ಶಾಖೆಯಾಗಿದೆಯಾ?’ ಎಂದು ಪ್ರಶ್ನಿಸಿದ್ದಾರೆ.
ಅಜಿತ್ ಅಂಜುಮ್ ಎನ್ನವವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕರಣೆ ವೇಳೆ ಸರಣಿ ವರದಿಗಳನ್ನು ಮಾಡಿದ್ದರು. ಕೋಮು ಉದ್ವಿಗ್ನತೆ ಹರಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಎಫ್ಐಆರ್ ದಾಖಲಾಗಿತ್ತು. ಹೀಗಾಗಿ ಅವರ ಪೋಸ್ಟ್ ಹಂಚಿಕೊಂಡು ರಾಹುಲ್ ಈ ರೀತಿ ಬರೆದುಕೊಂಡಿದ್ದಾರೆ.
ಟ್ರಂಪ್ ವ್ಯಾಪಾರ ಡೆಡ್‌ಲೈನ್‌ಗೆ ಮೋದಿ ತಲೆ ಬಾಗ್ತಾರೆ : ರಾಹುಲ್ ಗಾಂಧಿ
ಅಮೆರಿಕ ಜತೆ ನಡೆಯುತ್ತಿರುವ ವ್ಯಾಪಾರ ಒಪ್ಪಂದ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಟ್ರಂಪ್ ಮುಂದೆ ಪ್ರಧಾನಿ ಮೋದಿ ತಮ್ಮ ತಲೆ ತಗ್ಗಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬೇರೆಯವರು ನೀಡಿದ ಡೆಡ್‌ಲೈನ್‌ಗಳ ಅಡಿ ನಾವು ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಭಾರತದ ಹಿತಾಸಕ್ತಿ ರಕ್ಷಣೆಯಾದರೆ ಮಾತ್ರ ಭಾರತವು ಅಮೆರಿಕ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿಕೊಂಡಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಶನಿವಾರ ಪ್ರತಿಕ್ರಿಯಿ ನೀಡಿರುವ ರಾಹುಲ್ ಗಾಂಧಿ, ಟ್ರೇಡ್‌ಡೀಲ್ ವಿಚಾರದಲ್ಲಿ ಗೋಯಲ್ ಅವರು ಏನೇ ಹೇಳಿದರೂ ಅಂತಿಮವಾಗಿ ಟ್ರಂಪ್ ವಿಧಿಸಿರುವ ಗಡುವಿಗೆ ಮೋದಿ ಅವರು ತಲೆಬಾಗುವುದು ನಿಶ್ಚಿತ ಎಂದಿದ್ದಾರೆ. ಟ್ರಂಪ್ ಅವರು ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಜು.9ರ ಡೆಡ್‌ಲೈನ್ ನಿಗದಿಪಡಿಸಿದ್ದಾರೆ.