ಇವಿಎಂ, ಇ.ಡಿ, ಸಿಬಿಐ ಇಲ್ಲದೇ ಮೋದಿ ಎಲೆಕ್ಷನ್‌ ಗೆಲ್ಲಲ್ಲ: ರಾಹುಲ್‌ ಗಾಂಧಿ

KannadaprabhaNewsNetwork | Updated : Mar 18 2024, 12:54 PM IST

ಸಾರಾಂಶ

ನಿರುದ್ಯೋಗ, ಹಣದುಬ್ಬರ, ಸಮಾಜದಲ್ಲಿನ ದ್ವೇಷದ ಬಗ್ಗೆ ಗಮನ ಸೆಳೆಯಲು ನ್ಯಾಯ ಯಾತ್ರೆಯನ್ನು ನಡೆಸಲಾಗಿದೆ ಎಂದು ರಾಹುಲ್‌ ಗಾಂಧಿ ತಿಳಿಸಿದರು.

ಮುಂಬೈ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇವಿಎಂ, ಇ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಇಲ್ಲದೇ ಮೋದಿ ಚುನಾವಣೆ ಗೆಲ್ಲಲಾರರು. 

ಮೋದಿ ಅಧಿಕಾರಕ್ಕಾಗಿ ಹವಣಿಸುವ ಮುಖವಾಡ. ಅವರೊಬ್ಬ 56 ಇಂಚಿನ ಎದೆ ಇಲ್ಲದ ಪೊಳ್ಳು ಮನುಷ್ಯ ಎಂದು ಟೀಕಿಸಿದ್ದಾರೆ.

ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಮುಕ್ತಾಯದ ಅಂಗವಾಗಿ ಹಮ್ಮಿಕೊಂಡಿದ್ದ ಇಂಡಿಯಾ ಮೈತ್ರಿಕೂಟದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಭ್ರಷ್ಟಾಚಾರದ ವಿಷಯದಲ್ಲಿ ಮೋದಿ ಏಕಸ್ವಾಮ್ಯ ಹೊಂದಿದ್ದಾರೆ. 

ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ನಾಯಕರು ವಿಭಜನೆಯಾಗಿ ಆಡಳಿತ ಪಕ್ಷದ ಜೊತೆ ಕೈ ಜೋಡಿಸಿದ್ದು ಸುಮ್ಮನೆ ಎಂದುಕೊಂಡಿರಾ ಎಂದು ಪ್ರಶ್ನಿಸಿದರು.

ಇದೇ ವೇಳೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಹಣದುಬ್ಬರ ಮತ್ತು ಸಮಾಜದಲ್ಲಿನ ದ್ವೇಷದ ವಾತಾವರಣದ ಕುರಿತು ಸಮಾಜದ ಗಮನ ಸೆಳೆಯಲು ತಾವು ಭಾರತ್‌ ಜೋಡೋ ನ್ಯಾಯ್‌ ಯಾತ್ರೆ ಹಮ್ಮಿಕೊಂಡಿದ್ದಾಗಿ ರಾಹುಲ್‌ ತಿಳಿಸಿದರು.

Share this article