ಜು.1ರಿಂದ ರೈಲ್ವೆ ಟಿಕೆಟ್‌ ದರ ಏರಿಕೆ

KannadaprabhaNewsNetwork |  
Published : Jun 25, 2025, 01:18 AM IST
ರೈಲು | Kannada Prabha

ಸಾರಾಂಶ

ಜುಲೈ 1ರಿಂದ ಜಾರಿಗೆ ಬರುವಂತೆ ಟಿಕೆಟ್‌ ದರ ಏರಿಕೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಆದರೆ ಏರಿಕೆ ಎಲ್ಲಾ ಮಾದರಿಯ ರೈಲುಗಳ, ಎಲ್ಲಾ ರೀತಿಯ ಟಿಕೆಟ್‌ಗೂ ಅನ್ವಯವಾಗದು.

ಸಬರ್ಬನ್‌, ಕಡಿಮೆ ದೂರದ ಪ್ರಯಾಣಕ್ಕಿಲ್ಲ ಹೆಚ್ಚಳ

ದೂರ ಪ್ರಯಾಣ, ಎಸಿ ಕೋಚ್‌ಗಳಿಗೆ ಬೆಲೆ ಏರಿಕೆ

ನವದೆಹಲಿ: ಜುಲೈ 1ರಿಂದ ಜಾರಿಗೆ ಬರುವಂತೆ ಟಿಕೆಟ್‌ ದರ ಏರಿಕೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಆದರೆ ಏರಿಕೆ ಎಲ್ಲಾ ಮಾದರಿಯ ರೈಲುಗಳ, ಎಲ್ಲಾ ರೀತಿಯ ಟಿಕೆಟ್‌ಗೂ ಅನ್ವಯವಾಗದು.ರೈಲ್ವೆ ಇಲಾಖೆ ನಿರ್ಧಾರದ ಅನ್ವಯ, ಕಡಿಮೆ ದೂರದ ಮತ್ತು ಸಬ್‌ ಅರ್ಬನ್‌ ರೈಲು ಟಿಕೆಟ್‌ ದರಗಳು ಮೊದಲಿನಂತೆಯೇ ಮುಂದುವರೆಯಲಿವೆ. ಆದರೆ ದೂರ ಪ್ರಯಾಣಕ್ಕೆ ಮಾತ್ರ ಅಂತರ ಮತ್ತು ಕ್ಲಾಸ್‌ನ ಆಧಾರದಲ್ಲಿ ದರ ಏರಿಕೆ ಆಗಲಿದೆ. ನಿರ್ದಿಷ್ಟವಾಗಿ ಸೆಕೆಂಡ್‌ ಕ್ಲಾಸ್‌ನಲ್ಲಿ 500 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸಲು, ಮೇಲ್‌ ಅಥವಾ ಎಕ್ಸ್‌ಪ್ರೆಸ್‌ನ ಎಸಿ ಹಾಗೂ ಎಸಿ ರಹಿತ ಕೋಚ್‌ಗಳಿಗೆ ಈ ಹೆಚ್ಚಳ ಅನ್ವಯಿಸಲಿದೆ. ಯಾರ್‍ಯಾರಿಗೆ ಅನ್ವಯ?:

ಎಸಿ ರಹಿತ ಮೇಲ್‌ ಅಥವಾ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಪ್ರಯಾಣಿಸುವವರು ಪ್ರತಿ ಕಿ.ಮೀ. ಹೆಚ್ಚುವರಿ 1 ಪೈಸೆ ಪಾವತಿಸಬೇಕು. ಅತ್ತ ಎಲ್ಲಾ ಎ.ಸಿ. ದರ್ಜೆ ಪ್ರಯಾಣಿಕರಿಗೆ (ಎಸಿ 3 ಟೈರ್‌, 2 ಟೈರ್‌ ಅಥವಾ ಫಸ್ಟ್‌ ಕ್ಲಾಸ್‌ ಎಸಿ) ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳವಾಗಲಿದೆ. ಸೆಕೆಂಡ್‌ ಕ್ಲಾಸ್‌ ಕೋಚ್‌ಗಳ ಪ್ರಯಾಣವು 500 ಕಿ.ಮೀ. ಮೀರಿದರೆ, ಪ್ರತಿ ಕಿಲೋಮೀಟರ್‌ಗೆ ಅರ್ಧ ಪೈಸೆ ಏರಿಕೆ ಆಗಲಿದೆ. ಅಂದರೆ 1000 ಕಿ.ಮೀಗೆ 2.50 ರು. ಹೆಚ್ಚಳವಾಗಲಿದೆ.

ಬೆಲೆ ಏರಿಕೆ ಬಿಸಿ ಯಾರಿಗಿಲ್ಲ?:

ಸಬ್‌ ಅರ್ಬನ್‌ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಯಾವುದೇ ಬದಲಾವಣೆಯಾಗದು. ಅಂತೆಯೇ, ಸೆಕೆಂಡ್‌ ಕ್ಲಾಸ್‌ ಕೋಚ್‌ನಲ್ಲಿ 500 ಕಿ.ಮೀ. ವರೆಗೆ ಪ್ರಯಾಣಿಸಿದರೆ ಅದರ ಟಿಕೆಟ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದು. ಜೊತೆಗೆ ಮಾಸಿಕ ಪಾಸ್‌ ದರದಲ್ಲೂ ಯಾವುದೇ ಬದಲಾವಣೆ ಇರದು.

PREV

Recommended Stories

65 ಲಕ್ಷ ಬಿಹಾರ ಮತದಾರರ ಕೈಬಿಟ್ಟಿದ್ದೇಕೆ? : ಸುಪ್ರೀಂ ಪ್ರಶ್ನೆ
ಶುಭಾಂಶು ಶುಕ್ಲಾ ವಾರಾಂತ್ಯಕ್ಕೆ ಭಾರತಕ್ಕೆ