ಫ್ರಾನ್ಸ್‌ ಸಂಗೀತ ಉತ್ಸವದಲ್ಲಿ 145 ಮಂದಿ ಮೇಲೆ ಸಿರಿಂಜ್‌ ದಾಳಿ: 12 ಜನ ಬಂಧನ

KannadaprabhaNewsNetwork |  
Published : Jun 25, 2025, 12:35 AM IST
ಸಿರಿಂಜ್‌ ದಾಳಿ  | Kannada Prabha

ಸಾರಾಂಶ

ಫ್ರಾನ್ಸ್‌ನ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ‘ಫೆಟೆಸ್ ಡೆ ಲಾ ಮ್ಯೂಸಿಕ್’ ದೇಶಾದ್ಯಂತ ಹಲವು ಕಡೆಗಳಲ್ಲಿ ನಡೆಯುತ್ತಿದ್ದ ವೇಳೆ, 145 ಸಂಗೀತಾಸಕ್ತರ ಮೇಲೆ ಸಿರಿಂಜ್‌ ದಾಳಿ ನಡೆಸಿದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಈ ಪೈಕಿ ರಾಜಧಾನಿ ಪ್ಯಾರಿಸ್‌ ಒಂದರಲ್ಲೇ 13 ದಾಳಿಯ ಘಟನೆ ನಡೆದಿದೆ. ಒಟ್ಟಾರೆ ಪ್ರಕರಣ ಸಂಬಂಧ 12 ಜನರನ್ನು ಬಂಧಿಸಲಾಗಿದೆ.

ಮತ್ತು ಬರಿಸಿ ಲೈಂಗಿಕ ದೌರ್ಜನ್ಯದ ಯತ್ನದ ಶಂಕೆ

ಪ್ಯಾರಿಸ್‌: ಫ್ರಾನ್ಸ್‌ನ ಜನಪ್ರಿಯ ಸಂಗೀತ ಕಾರ್ಯಕ್ರಮವಾದ ‘ಫೆಟೆಸ್ ಡೆ ಲಾ ಮ್ಯೂಸಿಕ್’ ದೇಶಾದ್ಯಂತ ಹಲವು ಕಡೆಗಳಲ್ಲಿ ನಡೆಯುತ್ತಿದ್ದ ವೇಳೆ, 145 ಸಂಗೀತಾಸಕ್ತರ ಮೇಲೆ ಸಿರಿಂಜ್‌ ದಾಳಿ ನಡೆಸಿದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಈ ಪೈಕಿ ರಾಜಧಾನಿ ಪ್ಯಾರಿಸ್‌ ಒಂದರಲ್ಲೇ 13 ದಾಳಿಯ ಘಟನೆ ನಡೆದಿದೆ. ಒಟ್ಟಾರೆ ಪ್ರಕರಣ ಸಂಬಂಧ 12 ಜನರನ್ನು ಬಂಧಿಸಲಾಗಿದೆ.

ಈ ಕಾರ್ಯಕ್ರಮವು ಸಭಾಂಗಣ ಅಥವಾ ನಿರ್ದಿಷ್ಟ ವೇದಿಕೆಯಲ್ಲಿ ನಡೆಯುವ ಬದಲು ನಡುರಸ್ತೆಯಲ್ಲಿ ಆಯೋಜನೆಗೊಳ್ಳುತ್ತದೆ. ಆದಕಾರಣ, ದಾಳಿ ಮಾಡುವುದು ಕಷ್ಟವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಸಿರಿಂಜ್‌ ದಾಳಿ?:

ಸಿರಿಂಜ್‌ ದಾಳಿ ಎಂದರೆ, ನೆರೆದವರಿಗೆ ಏಕಾಏಕಿ ಸಿರಿಂಜ್‌(ಚುಚ್ಚುಮದ್ದು) ಚುಚ್ಚುವುದು. ಫ್ರಾನ್ಸ್‌ನಲ್ಲಿ ನಡೆದ ಈ ದಾಳಿಯನ್ನು ಪ್ರ್ಯಾಂಕ್‌(ತಮಾಷೆ) ಎನ್ನಲಾಗುತ್ತಿದ್ದರೂ, ದಾಳಿಗೆ ಒಳಗಾದ ಅನೇಕರನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಕೆಲವರ ಆರೋಗ್ಯ ಹದಗೆಟ್ಟಿರುವುದು ವರದಿಯಾಗಿದೆ.

ದಾಳಿಗೆ ತುತ್ತಾದವರಲ್ಲಿ ಬಹುತೇಕರು ಹದಿಹರೆಯದ ಹೆಣ್ಣುಮಕ್ಕಳೇ ಇದ್ದರು ಎಂದು ತಿಳಿದುಬಂದಿದೆ. ಆದ್ದರಿಂದ ಸಿರಿಂಜ್‌ನಲ್ಲಿ ಮತ್ತು ಬರಿಸುವ ದ್ರವವನ್ನು ತುಂಬಿಸಲಾಗಿತ್ತು ಹಾಗೂ ಅದರಿಂದ ಯುವತಿಯರ ಪ್ರಜ್ಞೆ ತಪ್ಪಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ