ಕೋಲ್ಕತಾ ಮೇಲೆ ದಾಳಿ ಮಾಡಿದರೆ ಪಾಕ್ ತುಂಡು ತುಂಡು: ರಾಜನಾಥ್‌

KannadaprabhaNewsNetwork |  
Published : Apr 08, 2026, 02:00 AM IST
ರಾಜನಾಥ್‌ | Kannada Prabha

ಸಾರಾಂಶ

ಪಾಕಿಸ್ತಾನವು ಕೋಲ್ಕತಾ ಮೇಲೆ ದಾಳಿ ನಡೆಸಲು ಯತ್ನಿಸಿದರೆ ಪಾಕಿಸ್ತಾನವನ್ನು ತುಂಡು ತುಂಡು ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಎಚ್ಚರಿಸಿದ್ದಾರೆ.

ಪಿಟಿಐ ಬ್ಯಾರಕ್‌ಪುರ (ಬಂಗಾಳ)

ಪಾಕಿಸ್ತಾನವು ಕೋಲ್ಕತಾ ಮೇಲೆ ದಾಳಿ ನಡೆಸಲು ಯತ್ನಿಸಿದರೆ ಪಾಕಿಸ್ತಾನವನ್ನು ತುಂಡು ತುಂಡು ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಎಚ್ಚರಿಸಿದ್ದಾರೆ.

‘ಭಾರತ ನಮ್ಮ ಮೇಲೆ ದಾಳಿ ಮಾಡಿದರೆ ಕೋಲ್ಕತಾ ಮೇಲೆರಗುತ್ತೇವೆ’ ಎಂದಿದ್ದ ಪಾಕ್‌ ಸಚಿವ ಖ್ವಾಜಾ ಆಸಿಫ್‌ ಹೇಳಿಕೆಗೆ ಮಂಗಳವಾರ ಬಿಜೆಪಿ ಸಭೆಯಲ್ಲಿ ತಿರುಗೇಟು ನೀಡಿದ ರಾಜನಾಥ್‌, ‘ಪಾಕಿಸ್ತಾನದ ರಕ್ಷಣಾ ಸಚಿವರು ಇಂತಹ ಪ್ರಚೋದನಕಾರಿ ಹೇಳಿಕೆ ನೀಡಬಾರದಿತ್ತು. 55 ವರ್ಷಗಳ ಹಿಂದೆ, ಪಾಕಿಸ್ತಾನ 2 ಭಾಗಗಳಾಗಿ ವಿಭಜನೆ ಆಗಿತ್ತು. ಈಗ ಅವರು ಬಂಗಾಳದ ಮೇಲೆ ಕಣ್ಣಿಡಲು ಪ್ರಯತ್ನಿಸಿದರೆ, ಪಾಕ್‌ ಎಷ್ಟು ಭಾಗಗಳಾಗಿ ವಿಭಜನೆಯಾಗುತ್ತದೆ ಎಂದು ದೇವರಿಗೆ ಮಾತ್ರ ತಿಳಿದಿದೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶಬರಿಮಲೆಗೆ ಸ್ತ್ರೀಯರ ಪ್ರವೇಶ ನಿರ್ಬಂಧಕ್ಕೆ ಕೇಂದ್ರ ಬೆಂಬಲ
ಮಣಿಪುರ ಮತ್ತೆ ಹಿಂಸೆ, ಬಾಂಬ್‌ ದಾಳಿ: 5 ಬಲಿ