ರಾಮ್‌ಚರಣ್‌ಗೆ ಆಫ್ರಿಕನ್‌ ಕುಸ್ತಿಪಟು ಬಾಡಿಗಾರ್ಡ್‌:ದಿನಕ್ಕೆ ₹4 ಲಕ್ಷ ಸಂಬಳ!

KannadaprabhaNewsNetwork |  
Published : May 28, 2026, 03:00 AM IST
Ramcharan

ಸಾರಾಂಶ

ಜೂ.4ರಂದು ಬಿಡುಗಡೆಯಾಗುತ್ತಿರುವ ‘ಪೆದ್ದಿ’ ಚಿತ್ರದ ಪ್ರಚಾರಕ್ಕಾಗಿ ಅದರ ನಾಯಕನಟ ರಾಮ್‌ಚರಣ್‌ ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ ಎಲ್ಲೇ ಹೋದರೂ ನಟನಿಗಿಂತ ಜಾಸ್ತಿ ಅವರ ಹಿಂದೆ ಬರುತ್ತಿರುವ ಬಾಡಿಗಾರ್ಡ್‌ ಒಬ್ಬರು ಜನರ ಗಮನ ಸೆಳೆಯುತ್ತಿದ್ದಾರೆ.

ಅಮರಾವತಿ: ಜೂ.4ರಂದು ಬಿಡುಗಡೆಯಾಗುತ್ತಿರುವ ‘ಪೆದ್ದಿ’ ಚಿತ್ರದ ಪ್ರಚಾರಕ್ಕಾಗಿ ಅದರ ನಾಯಕನಟ ರಾಮ್‌ಚರಣ್‌ ದೇಶಾದ್ಯಂತ ಸಂಚರಿಸುತ್ತಿದ್ದಾರೆ. ಆದರೆ ಎಲ್ಲೇ ಹೋದರೂ ನಟನಿಗಿಂತ ಜಾಸ್ತಿ ಅವರ ಹಿಂದೆ ಬರುತ್ತಿರುವ ಬಾಡಿಗಾರ್ಡ್‌ ಒಬ್ಬರು ಜನರ ಗಮನ ಸೆಳೆಯುತ್ತಿದ್ದಾರೆ.

ಪೆದ್ದಿ ಎಂಬ ಪೈಲ್ವಾನನ ಪಾತ್ರ

ಚಿತ್ರದಲ್ಲಿ ಪೆದ್ದಿ ಎಂಬ ಪೈಲ್ವಾನನ ಪಾತ್ರ ಮಾಡುತ್ತಿರುವ ಮೆಗಾ ಪವರ್‌ಸ್ಟಾರ್‌, ಆಫ್ರಿಕಾದ ಎಂಎಂಎ ಕುಸ್ತಿಪಟು ಕೆವಿನ್ ಕುಂಟಾ ಅವರನ್ನು ತಮ್ಮ ಅಂಗರಕ್ಷಕರನ್ನಾಗಿ ನೇಮಿಸಿಕೊಂಡಿದ್ದು, ಅವರಿಗೆ ದಿನಕ್ಕೇ 2-4 ಲಕ್ಷ ರು. ಪಾವತಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದು ನಿಜವೇ ಆದಲ್ಲಿ ಭಾರತೀಯ ನಟರೊಬ್ಬರ ಅಂಗರಕ್ಷಕ ಪಡೆಯುತ್ತಿರುವ ಬೃಹತ್‌ ಸಂಬಳ ಎನಿಸಿಕೊಳ್ಳುವುದು.

ಗಾಂಬಿಯಾದವರಾದ ಕೆವಿನ್ ಸದ್ಯ ಇಟಲಿ ನಿವಾಸಿ

ಗಾಂಬಿಯಾದವರಾದ ಕೆವಿನ್ ಸದ್ಯ ಇಟಲಿ ನಿವಾಸಿಯಾಗಿದ್ದಾರೆ. ಮಾರ್ಷಲ್ ಆರ್ಟ್ಸ್‌ನ ವಿಧವಾದ ಎಂಎಂಎ ಸ್ಪರ್ಧೆಗಳಿಂದಲೇ ಪ್ರಸಿದ್ಧವಾಗಿರುವ ಇವರು, ಹಲವು ಗಣ್ಯರಿಗೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡುವ ಅನುಭವ ಹೊಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಟಿಎಂಸಿ ಕಚೇರಿ ಬಳಿ ಹೂತಿಟ್ಟಿದ್ದ₹500 ನೋಟಿನ ಚೀಲ ಪತ್ತೆ?
ಮೇಕೆದಾಟು ವಿರುದ್ಧ ಮೋದಿಗೆ ವಿಜಯ್‌ ನೇರ ದೂರು