ರಣಬೀರ್‌, ರಶ್ಮಿಕಾ ಲಿಪ್‌ ಲಾಕ್‌: ‘ಅನಿಮಲ್‌’ ಚಿತ್ರದ ಹೊಸ ಪೋಸ್ಟರ್‌

KannadaprabhaNewsNetwork | Updated : Oct 11 2023, 10:40 AM IST

ಸಾರಾಂಶ

ನಟ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್‌’ ಚಿತ್ರದ ಹೊಸ ಪೋಸ್ಟರ್‌ವೊಂದನ್ನು ಚಿತ್ರತಂಡ ಹಂಚಿಕೊಂಡಿದ್ದು, ಇದರಲ್ಲಿ ರಣಬೀರ್‌, ರಶ್ಮಿಕಾ ಲಿಪ್‌ ಲಾಕ್‌ ಮಾಡಿದ್ದಾರೆ.
ಮುಂಬೈ: ನಟ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಅನಿಮಲ್‌’ ಚಿತ್ರದ ಹೊಸ ಪೋಸ್ಟರ್‌ವೊಂದನ್ನು ಚಿತ್ರತಂಡ ಹಂಚಿಕೊಂಡಿದ್ದು, ಇದರಲ್ಲಿ ರಣಬೀರ್‌, ರಶ್ಮಿಕಾ ಲಿಪ್‌ ಲಾಕ್‌ ಮಾಡಿದ್ದಾರೆ. ಚಿತ್ರದ ‘ಹುವಾ ಮೈ’ ಹಾಡು ಬುಧವಾರ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಹೆಲಿಕಾಪ್ಟರ್‌ನಲ್ಲಿ ಕುಳಿತು ಜೋಡಿ ಮುತ್ತಿಕ್ಕಿರುವ ಪೋಸ್ಟರ್‌ ಬಿಡುಗಡೆ ಮಾಡಲಾಗಿದ್ದು ಇದೀಗ ಭಾರೀ ಸದ್ದು ಮಾಡಿದೆ. ಕನ್ನಡ ಮತ್ತು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಹಾಡು ರಿಲೀಸ್‌ ಆಗುತ್ತಿದ್ದು, ಡಿ.1 ರಂದು ಚಿತ್ರ ತೆರೆ ಕಾಣಲಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್‌ ಪೂರ್ಣಗೊಂಡಿದೆ ಎನ್ನಲಾಗಿದೆ. ಚಿತ್ರವನ್ನು ಸಂದೀಪ್‌ ರೆಡ್ಡಿ ನಿರ್ದೇಶಿಸಿದ್ದರೆ, ನಟ ಅನಿಲ್‌ ಕಪೂರ್‌ ನಿರ್ಮಾಣ ಮಾಡಿದ್ದಾರೆ.

Share this article