ತಾಜ್‌ ಹೋಟೆಲ್‌ ಮೇಲಿನ ಉಗ್ರರ ದಾಳಿ ವೇಳೆ 3 ದಿನ ಹೋಟೆಲ್‌ ಬಳಿಯೇ ರತನ್ ಟಾಟಾ ಮೊಕ್ಕಾಂ

Published : Oct 11, 2024, 10:47 AM IST
taj hotel

ಸಾರಾಂಶ

2008ರಂದು ಪಾಕ್‌ ಮೂಲದ ಉಗ್ರರ ತಂಡ ಮುಂಬೈನಲ್ಲಿ ಟಾಟಾ ಗ್ರೂಪ್‌ಗೆ ಸೇರಿದ ತಾಜ್‌ ಹೋಟೆಲ್‌ ಸೇರಿ ಹಲವು ಕಡೆ ಭೀಕರ ದಾಳಿ ನಡೆಸಿತ್ತು. 160ಕ್ಕೂ ಹೆಚ್ಚು ಜನರನ್ನು ಬಲಿಪಡೆದ ದಾಳಿಯ ಸುದ್ದಿ ತಿಳಿಯುತ್ತಲೇ 70 ವರ್ಷದ ರತನ್‌ ಟಾಟಾ ಸ್ಥಳಕ್ಕೆ ಧಾವಿಸಿದ್ದರು.

ಮುಂಬೈ :  2008ರಂದು ಪಾಕ್‌ ಮೂಲದ ಉಗ್ರರ ತಂಡ ಮುಂಬೈನಲ್ಲಿ ಟಾಟಾ ಗ್ರೂಪ್‌ಗೆ ಸೇರಿದ ತಾಜ್‌ ಹೋಟೆಲ್‌ ಸೇರಿ ಹಲವು ಕಡೆ ಭೀಕರ ದಾಳಿ ನಡೆಸಿತ್ತು. 160ಕ್ಕೂ ಹೆಚ್ಚು ಜನರನ್ನು ಬಲಿಪಡೆದ ದಾಳಿಯ ಸುದ್ದಿ ತಿಳಿಯುತ್ತಲೇ 70 ವರ್ಷದ ರತನ್‌ ಟಾಟಾ ಸ್ಥಳಕ್ಕೆ ಧಾವಿಸಿದ್ದರು.

ಇಡೀ ತಾಜ್‌ ಹೋಟೆಲ್‌ ತುಂಬಾ ಉಗ್ರರ ಗುಂಡಿನ ದಾಳಿ, ಗ್ರೆನೇಡ್‌ ಸ್ಫೋಟ, ಬೆಂಕಿ ಹತ್ತಿಕೊಂಡ ಬಳಿಕ ಒಳಗಡೆ ಸ್ಫೋಟದ ಸದ್ದು ಭೀಕರ ಚಿತ್ರಣ ಸೃಷ್ಟಿತ್ತು. ಈ ವೇಳೆ ಭದ್ರತಾ ಪಡೆಗಳು ನಡೆಸಿದ ಉಗ್ರರ ತೆರವು ಕಾರ್ಯಾಚರಣೆಯನ್ನು ತಾಜ್‌ ಹೋಟೆಲ್‌ನ ಕೊಲಾಬಾ ಎಂಡ್‌ನಲ್ಲಿ ನಿಂತೇ ರತನ್‌ ವೀಕ್ಷಿಸಿದ್ದರು.

ನಂತರ ಘಟನೆಯಲ್ಲಿ ಮಡಿದವರ ಕುಟುಂಬ, ಸಿಬ್ಬಂದಿಗಳನ್ನು ರತನ್‌ ವೈಯಕ್ತಿಕವಾಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಉಗ್ರ ದಾಳಿಗೆ ಹೋಟೆಲ್‌ ಇದ್ದ ಸ್ಥಿತಿ ನೋಡಿದರೆ ಅದು ತಕ್ಷಣಕ್ಕೆ ಪುನಾರಂಭ ಸಾಧ್ಯತೆ ದೂರವಾಗಿಸಿತ್ತು. ಆದರ ರತನ್‌ರ ಛಲದಿಂದಾಗಿ ಕೇವಲ ಒಂದೇ ತಿಂಗಳಲ್ಲಿ ಹೋಟೆಲ್‌ ಪುನಾರಂಭವಾಗಿ ಉಗ್ರರ ವಿರುದ್ಧ ಸೆಟೆದಿದ್ದು ನಿಂತಿತ್ತು.

ಇನ್ನೊಂದು ವಿಶೇಷವೆಂದರೆ ಅಂಥದ್ದೊಂದು ದಾಳಿ ನಡೆಸಿದ್ದ ಪಾಕಿಸ್ತಾನ ದೇಶದ ಜಿಡಿಪಿಯನ್ನೇ ಟಾಟಾ ಸಮೂಹ ದಾಳಿ ನಡೆದ 6 ವರ್ಷಗಳಲ್ಲಿ ಮೀರಿಸಿತ್ತು.

PREV

Recommended Stories

- ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್‌.ಸಂತೋಷ್‌ ಬಗ್ಗೆ ಅವಹೇಳನ ಪ್ರಕರಣಬುರುಡೆ ಕೇಸ್‌ ತಿಮರೋರಿ ಅರೆಸ್ಟ್‌- ಪೊಲೀಸರ ಜತೆಗೆ ಬೆಂಬಲಿಗರ ತೀವ್ರ ವಾಗ್ವಾದ । ಉಜಿರೆಯ ಮನೆಯಲ್ಲಿ ಹೈಡ್ರಾಮಾ- ಎಎಸ್ಪಿ ಕಾರಿಗೆ ವಾಹನ ಡಿಕ್ಕಿ: 3 ಜನ ಬಂಧನ । ತಿಮರೋಡಿ 14 ದಿನ ನ್ಯಾಯಾಂಗ ವಶ
ಬಂಧನದಿಂದ ಯೂಟ್ಯೂಬರ್‌ಸಮೀರ್‌ ಸ್ವಲ್ಪದರಲ್ಲೇ ಪಾರು- ಎಐ ವಿಡಿಯೋ ಬಳಸಿ ಆಕ್ಷೇಪಾರ್ಹ ವರದಿ ಪ್ರಕರಣ- ಪೊಲೀಸರಿಂದ ತಲಾಶ್‌ । ಅಷ್ಟರಲ್ಲಿ ಕೋರ್ಟ್‌ ಬೇಲ್‌