ಮುಂಬೈ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ರದ್ದುಗೊಳಿಸಿದೆ.
‘ಬ್ಯಾಂಕ್‌ನ ನಿರ್ವಹಣೆಯ ಸಾಮಾನ್ಯ ಸ್ವರೂಪವು ಠೇವಣಿದಾರರು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿವೆ. ವ್ಯವಹಾರಗಳು ಬ್ಯಾಂಕ್ ಮತ್ತು ಅದರ ಠೇವಣಿದಾರರ ಹಿತಾಸಕ್ತಿಗೆ ಹಾನಿ ಆಗುವ ರೀತಿಯಲ್ಲಿ ನಡೆದಿವೆ. ಹೀಗಾಗಿ ಪೇಟಿಎಂ ಪಾವತಿ ಬ್ಯಾಂಕ್ ಯಾವುದೇ ಬ್ಯಾಂಕಿಂಗ್ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗಿದೆ’ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೆ, ‘ಬ್ಯಾಂಕ್ ಅನ್ನು ಮುಚ್ಚಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುತ್ತದೆ. ಸಂಸ್ಥೆಯನ್ನು ಮುಚ್ಚಿದ ನಂತರ ಠೇವಣಿದಾರರಿಗೆ ಹಣ ಮರುಪಾವತಿಸಲು ಪೇಟಿಎಂ ಬ್ಯಾಂಕ್ ಸಾಕಷ್ಟು ದ್ರವ್ಯತೆಯನ್ನು ಹೊಂದಿದೆ’ ಎಂದು ಅದು ಹೇಳಿದೆ.
2022ರ ಮಾರ್ಚ್ 1ರಿಂದ ಜಾರಿಗೆ ಬರುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದನ್ನು ನಿರ್ಬಂಧಿಸಲಾಗಿತ್ತು.