ಆರ್‌ಬಿಐ ಬಡ್ಡಿದರ ಏರಿಕೆ ಶಾಕ್‌: 4 ವರ್ಷದಲ್ಲೇ ಮೊದಲು

Published : Oct 08, 2026, 07:49 AM IST
rbi repo rate hike

ಸಾರಾಂಶ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜನರಿಗೆ ಬಡ್ಡಿದರದ ಏರಿಕೆ ಶಾಕ್‌ ನೀಡಿದ್ದು, ರೆಪೋ ದರವನ್ನುಶೇ.0.25ರಷ್ಟು ಹೆಚ್ಚಿಸಿದ್ದು, ಶೇ.5.50ಕ್ಕೆ ಏರಿಕೆ ಮಾಡಿದೆ. ಸುಮಾರು 3.5 ವರ್ಷಗಳ ನಂತರ ಆರ್‌ಬಿಐ ರೆಪೊ ದರ ಹೆಚ್ಚಿಸುತ್ತಿರುವುದು ಇದೇ ಮೊದಲು.

ಮುಂಬೈ :  ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜನರಿಗೆ ಬಡ್ಡಿದರದ ಏರಿಕೆ ಶಾಕ್‌ ನೀಡಿದ್ದು, ರೆಪೋ ದರವನ್ನುಶೇ.0.25ರಷ್ಟು ಹೆಚ್ಚಿಸಿದ್ದು, ಶೇ.5.50ಕ್ಕೆ ಏರಿಕೆ ಮಾಡಿದೆ. ಸುಮಾರು 3.5 ವರ್ಷಗಳ ನಂತರ ಆರ್‌ಬಿಐ ರೆಪೊ ದರ ಹೆಚ್ಚಿಸುತ್ತಿರುವುದು ಇದೇ ಮೊದಲು. ಇದರೊಂದಿಗೆ ಬ್ಯಾಂಕ್‌ ಸಾಲದ ಬಡ್ಡಿದರ ಹೆಚ್ಚಲಿದ್ದು, ಗ್ರಾಹಕರ ಇಎಂಐ ಕೂಡ ಏರಲಿದೆ. ಆದರೆ ಇದರ ಜತೆಗೆ ಠೇವಣಿ ಬಡ್ಡಿದರಗಳು ಕೂಡ ಏರಲಿವೆ.

ದ್ವೈಮಾಸಿಕ ಹಣಕಾಸು ನೀತಿ ಪ್ರಕಟ

ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿ, ಬ್ಯಾಂಕ್‌ ಈ ಬಗ್ಗೆ ಸರ್ವಾನುಮತದ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ.

ಈವರೆಗೆ ರೆಪೋ ದರ ಶೇ.5.25 ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಚಿಲ್ಲರೆ ಹಣದುಬ್ಬರ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಮುಂಬರುವ ಜಾಗತಿಕ ಆರ್ಥಿಕ ಬದಲಾವಣೆಗಳ ಹಿನ್ನೆಲೆಯಲ್ಲಿ, ಈ ಬಾರಿ ಬಡ್ಡಿದರವನ್ನು 25 ಮೂಲಾಂಕಗಳಷ್ಟು (0.25%) ಹೆಚ್ಚಿಸಿದೆ.

ಈ ಹಿಂದೆ ಕೊನೆಯದಾಗಿ ಫೆಬ್ರವರಿ 2023 ರಲ್ಲಿ ರೆಪೊ ದರವನ್ನು ಶೇ. 6.50 ಕ್ಕೆ ಏರಿಸಲಾಗಿತ್ತು. ತದನಂತರ ದರವನ್ನು ಕಡಿತಗೊಳಿಸುತ್ತಾ ಬಂದಿತ್ತು. ಆದರೆ ಪ್ರಸ್ತುತ ಜಾಗತಿಕ ಪರಿಸ್ಥಿತಿಯಿಂದಾಗಿ ಮತ್ತೆ ದರ ಏರಿಕೆಯ ಹಾದಿ ತುಳಿಯುವುದು ಅನಿವಾರ್ಯವಾಗಿದೆ ಎಂದು ಆರ್‌ಬಿಐ ಸ್ಷಷ್ಟಪಡಿಸಿದೆ.

ಹಣದುಬ್ಬರ ಹೆಚ್ಚಳ:

ಇನ್ನು ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಪ್ರಮಾಣವು ಶೇ. 5.2ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದೆ. ಇದು ಆರ್‌ಬಿಐ ಮಾನದಂಡವಾದ ಶೇ.5ಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಅಗತ್ಯವಸ್ತುಗಳ ದರ ಮತ್ತಷ್ಟು ಏರಿಕೆ ಆಗಬಹುದಾಗಿದೆ.

ಜಿಡಿಪಿ ಎರಿಕೆ:

ಇದೇ ವೇಳೆ, ಪ್ರಸಕ್ತ ಹಣಕಾಸು ವರ್ಷದ (2026-27) ಜಿಡಿಪಿ ವೃದ್ಧಿ ದರದ ಅಂದಾಜನ್ನು ಶೇ. 7.1ಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ ಅದು ಶೇ.6.7ರ ದರದಲ್ಲಿ ಬೆಳವಣಿಗೆ ಆಗಬಹುದು ಎಂದು ಅಂದಾಜಿಸಿತ್ತು.

ಯುಪಿಐ ಶುಲ್ಕ ಪರಿಣಾಮವಿಲ್ಲ:

ಯುಪಿಐ ವಹಿವಾಟಿನಶುಲ್ಕ ಸಣ್ಣ ಪ್ರಮಾಣದ್ದಾಗಿದ್ದು ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಮುಂದಿನ ದ್ವೀಮಾಸಿಕ ವಿತ್ತ ನೀತಿಯ ಸಭೆ ಡಿ.2 ರಿಂದ 4ರವರೆಗೆ ನಡೆಯಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಿಕಸಿತ ಭಾರತಕ್ಕೆ ಮೋದಿ ಹೊಸ ಘೋಷವಾಕ್ಯ: ವಿ ವಿಲ್‌ ಡು ಇಟ್‌
2ನೇ ದಿನವೂ ಸಿಇಸಿ ವಿರುದ್ಧ ಇಂಡಿಯಾ ಕೂಟದ ದಂಗಲ್‌