ಅಧಿಕಾರಿಗಳ ವಾಕ್ಸಮರ ವರದಿ ವಾಸ್ತವಾಂಶಕ್ಕೆ ವಿರುದ್ಧ : ಸಿಎಸ್‌

Published : Sep 25, 2026, 07:50 AM IST
Shalini Rajaneesh

ಸಾರಾಂಶ

ಸೈಬ‌ರ್ ಅಪರಾಧಗಳ ತನಿಖೆ, ಸೈಬರ್ ಭದ್ರತೆ, ಸಾಮರ್ಥ್ಯ ವೃದ್ಧಿ, ತಾಂತ್ರಿಕ ನಾವೀನ್ಯತೆ ಮತ್ತು ನಾಗರಿಕರ ರಕ್ಷಣೆಯ ಕ್ಷೇತ್ರಗಳಲ್ಲಿ ಕರ್ನಾಟಕವು ನಿರಂತರವಾಗಿ ಮುಂಚೂಣಿಯಲ್ಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೇಳಿದ್ದಾರೆ.

ಬೆಂಗಳೂರು : ಸೈಬ‌ರ್ ಅಪರಾಧಗಳ ತನಿಖೆ, ಸೈಬರ್ ಭದ್ರತೆ, ಸಾಮರ್ಥ್ಯ ವೃದ್ಧಿ, ತಾಂತ್ರಿಕ ನಾವೀನ್ಯತೆ ಮತ್ತು ನಾಗರಿಕರ ರಕ್ಷಣೆಯ ಕ್ಷೇತ್ರಗಳಲ್ಲಿ ಕರ್ನಾಟಕವು ನಿರಂತರವಾಗಿ ಮುಂಚೂಣಿಯಲ್ಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೇಳಿದ್ದಾರೆ.

ಪ್ರಧಾನಿ ಅವರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆ

ಇತ್ತೀಚೆಗೆ ಸೈಬರ್ ಅಪರಾಧ ಕೃತ್ಯಗಳ ನಿಯಂತ್ರಣ ಮತ್ತು ತನಿಖೆ ಸಂಬಂಧ ಪ್ರಧಾನಿ ಅವರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ಮಧ್ಯೆ ವಾಕ್ಸಮರ ನಡೆದಿರುವ ಕುರಿತು ‘ಸಿಎಸ್‌ ಎದುರಲ್ಲೇ ಹಿರಿಯ ಐಪಿಎಸ್‌ಗಳ ಡಿಶುಂ ಡಿಶುಂ’ ಶೀರ್ಷಿಕೆಯಡಿ ಗುರುವಾರ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಗೆ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾ ವರದಿ ವಾಸ್ತವಾಂಶಗಳಿಗೆ ವಿರುದ್ಧ

ಸೈಬರ್ ಅಪರಾಧ ಮತ್ತು ಸೈಬರ್ ಭದ್ರತೆ ಕ್ಷೇತ್ರಗಳಲ್ಲಿ ಕರ್ನಾಟಕ ಪೊಲೀಸರ ಕಾರ್ಯನಿರ್ವಹಣೆಗೆ ಸಂಬಂಧಿಸಿ ಪ್ರಕಟವಾದ ಪತ್ರಿಕಾ ವರದಿ ವಾಸ್ತವಾಂಶಗಳಿಗೆ ವಿರುದ್ಧವಾಗಿದೆ. ಅಲ್ಲದೆ ನಡೆದೇ ಇಲ್ಲದ ಹೇಳಿಕೆಗಳು ಮತ್ತು ಘಟನೆಗಳನ್ನು ನಡೆದಂತೆಯೇ ಬಿಂಬಿಸಲಾಗಿದೆ ಎಂದು ಅಧಿಕಾರಿಗಳ ಗಲಾಟೆಯನ್ನು ಅವರು ನಿರಾಕರಿಸಿದ್ದಾರೆ.

ಸೈಬ‌ರ್ ಅಪರಾಧಗಳ ತನಿಖೆ, ಸೈಬರ್ ಭದ್ರತೆ, ಸಾಮರ್ಥ್ಯ ವೃದ್ಧಿ, ತಾಂತ್ರಿಕ ನಾವೀನ್ಯತೆ ಮತ್ತು ನಾಗರಿಕರ ರಕ್ಷಣೆಯ ಕ್ಷೇತ್ರಗಳಲ್ಲಿ ಕರ್ನಾಟಕವು ನಿರಂತರವಾಗಿ ಮುಂಚೂಣಿಯಲ್ಲಿದೆ. ರಾಜ್ಯದ ಸಾಂಸ್ಥಿಕ ವ್ಯವಸ್ಥೆಗಳು ಮತ್ತು ಉಪಕ್ರಮಗಳು ಇತರರು ಅನುಸರಿಸಬಹುದಾದ ಮಾದರಿಗಳೆಂದು ಗುರುತಿಸಲ್ಪಟ್ಟಿವೆ. ವಿಶೇಷವಾಗಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಇತ್ತೀಚಿನ ವರದಿ ಸೈಬರ್ ಅಪರಾಧಗಳನ್ನು ಎದುರಿಸುವಲ್ಲಿ ಕರ್ನಾಟಕದ ಕಾರ್ಯಕ್ರಮತೆಯನ್ನು ಅಗ್ರ ಶ್ರೇಣಿಯಲ್ಲಿರಿಸಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜ್ಞಾನೇಶ್‌ ರಾಜೀನಾಮೆಗೆ ಜಿರಳೆ 48 ಗಂಟೆ ಗಡುವು - ಪದತ್ಯಾಗ ಮಾಡದಿದ್ದರೆ ಮತ್ತೆ ಧರಣಿ
SIR ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರಕ್ಕೆ ತೀವ್ರ ಆಕ್ರೋಶ