ಆಂಧ್ರದಲ್ಲಿ 3ನೇ ಮಗು ಹೆತ್ತರೆ ₹25,000 ಪ್ರೋತ್ಸಾಹ ಧನ!

Published : Mar 07, 2026, 01:49 PM IST
infant

ಸಾರಾಂಶ

ದೇಶದ ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ಜನಸಂಖ್ಯಾ ಕುಸಿತ ಕಾಣುತ್ತಿರುವ ಆಂಧ್ರಪ್ರದೇಶದಲ್ಲಿನ್ನು 3ನೇ ಮಗುವನ್ನು ಹೊಂದುವವರಿಗೆ ರಾಜ್ಯ ಸರ್ಕಾರದ ಕಡೆಯಿಂದ 25,000 ರು. ನಗದು ಪ್ರೋತ್ಸಾಹ ಧನ ನೀಡಲಾಗುವುದು.

 ವಿಜಯವಾಡ: ದೇಶದ ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ಜನಸಂಖ್ಯಾ ಕುಸಿತ ಕಾಣುತ್ತಿರುವ ಆಂಧ್ರಪ್ರದೇಶದಲ್ಲಿನ್ನು 3ನೇ ಮಗುವನ್ನು ಹೊಂದುವವರಿಗೆ ರಾಜ್ಯ ಸರ್ಕಾರದ ಕಡೆಯಿಂದ 25,000 ರು. ನಗದು ಪ್ರೋತ್ಸಾಹ ಧನ ನೀಡಲಾಗುವುದು. ಇದಕ್ಕೆ ಸಂಬಂಧಿಸಿದ ಕರಡು ಮಸೂದೆಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಧಾನಸಭೆಯಲ್ಲಿ ಘೋಷಿಸಿದ್ದು, ಏ.1ರಿಂದ ಜಾರಿಗೆ ತರಲು ಚಿಂತನೆ ನಡೆದಿದೆ ಎಂದಿದ್ದಾರೆ.

ಹೆಚ್ಚು ಮಕ್ಕಳನ್ನು ಹೊಂದಲು ದಂಪತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಪೋಷಣ-ಶಿಕ್ಷಾ-ಸುರಕ್ಷಾ ಪ್ಯಾಕೇಜ್‌ ಅಡಿ ಈ ಆರ್ಥಿಕ ನೆರವಿನೊಂದಿಗೆ, 3ನೇ ಮಕ್ಕಳು 18 ವರ್ಷದವರಾಗುವವರೆಗೆ ಅವರ ಶಿಕ್ಷಣದ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ. 12 ತಿಂಗಳು ಮಾತೃತ್ವದ ರಜೆ ಹಾಗೂ 2 ತಿಂಗಳು ಪಿತೃತ್ವ ರಜೆ ಸಿಗಲಿದೆ. ಐವಿಎಫ್‌ ಮೂಲಕ ಮಗು ಪಡೆಯಲು ಮುಂದಾದವರಿಗೆ ಸಬ್ಸಿಡಿ ದರದಲ್ಲಿ ಸೇವೆಯನ್ನು ನೀಡಲಾಗುತ್ತದೆ. 3 ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರರು ನಿವೃತ್ತಿಯ ವಯಸ್ಸನ್ನು ಸಮೀಪಿಸುತ್ತಿದ್ದರೆ, ಅವರಿಗೆ 15 ದಿನಗಳ ಯೋಗಕ್ಷೇಮದ ರಜೆ ಜತೆಗೆ 50,000 ರು. ಆರೋಗ್ಯ ನಿಧಿಯನ್ನು ನೀಡಲಾಗುವುದು.

ಕಾರಣವೇನು?:

1993 3.0 ಇದ್ದ ಆಂಧ್ರದ ಫಲವತ್ತತೆ ದರವು(ಟಿಆರ್‌ಎಫ್‌) ಪ್ರಸ್ತುತ 1.4ಕ್ಕೆ ಇಳಿಕೆಯಾಗಿದೆ. ಇದು ದಕ್ಷಿಣದ ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಅತಿ ಕಡಿಮೆ. ಇದು ರಾಜ್ಯದ ಆರ್ಥಿಕ ಬೆಳವಣಿಗೆಗೆ ಸವಾಲಾಗಿ ಪರಿಣಮಿಸುತ್ತದೆ. ಅಂತೆಯೇ, ಲೋಕಸಭಾ ಸ್ಥಾನಗಳಲ್ಲಿ ಕುಸಿತಕ್ಕೂ ಕಾರಣವಾಗುತ್ತದೆ.

ಹೇರಲಾಗಿದ್ದ ನಿರ್ಬಂಧವನ್ನು ತೆರವು

ಇದನ್ನು ತಡೆಯುವುದಕ್ಕಾಗಿ, ಈ ಮೊದಲು 2ಕ್ಕಿಂತ ಹೆಚ್ಚು ಮಕ್ಕಳಿರುವವರು ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವುದರ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು. ಇದೀಗ ಹೊಸ ಯೋಜನೆಯನ್ನೇ ಘೋಷಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುದ್ಧ 100 ದಿನ ಮುಂದುವರಿಯುವ ಸಾಧ್ಯತೆ!
ಕನ್ನಡತಿ ಕೃತಿ ಕಾರಂತ್‌ಗೆ ಜಾಗತಿಕ ಪ್ರಶಸ್ತಿ