ಜೀವನ ನರಕ ಮಾಡಿಬಿಟ್ರಿ : ಕ್ಷಮಿಸಿ ಎಂದಿದ್ದ ಜೆನ್‌ಝೀ ಮತ್ತೆ ಮೋದಿ ವಿರುದ್ಧ ಕಿಡಿ

KannadaprabhaNewsNetwork |  
Published : Aug 31, 2026, 01:45 AM ISTUpdated : Aug 31, 2026, 05:21 AM IST
pm modi abuse video ruchika singh apology jantar mantar fir delhi police noida news

ಸಾರಾಂಶ

ಕಾಕ್ರೋಚ್‌ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಬಂದಂತೆ ನಿಂದಿಸಿ, ಬಳಿಕ ಕ್ಷಮೆ ಯಾಚಿಸಿದ್ದ 15ರ ಬಾಲಕಿ ಇದೀಗ ಮತ್ತೊಂದು ವಿಡಿಯೋ ಮಾಡಿ ವಾಗ್ದಾಳಿ ನಡೆಸಿದ್ದಾಳೆ.

ನವದೆಹಲಿ: ಕಾಕ್ರೋಚ್‌ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಬಂದಂತೆ ನಿಂದಿಸಿ, ಬಳಿಕ ಕ್ಷಮೆ ಯಾಚಿಸಿದ್ದ 15ರ ಬಾಲಕಿ ಇದೀಗ ಮತ್ತೊಂದು ವಿಡಿಯೋ ಮಾಡಿ ವಾಗ್ದಾಳಿ ನಡೆಸಿದ್ದಾಳೆ.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿರುವ ರುಚಿಕಾ ಸಿಂಗ್‌, ‘ಮೋದಿ, ನೀವು ನನ್ನ ಜೀವನವನ್ನು ನರಕಸದೃಶ ಮಾಡಿಬಿಟ್ಟಿರಿ. ನನ್ನ ಹಿಂದೆ ಬಿದ್ದು ತುಂಬಾ ಹಿಂಸೆ ನೀಡಿದ್ದೀರಿ. ನನ್ನ ಬಳಿ ಈಗ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಇದ್ದದ್ದನ್ನೆಲ್ಲಾ ನೀವು ಕಸಿದಿರಿ.

ಎಲ್ಲರಿಗಾದರೂ ಹೋಗುವ ಸ್ವಾತಂತ್ರ್ಯವೂ ನನಗಿಲ್ಲದಾಗಿದೆ

ಎಲ್ಲರಿಗಾದರೂ ಹೋಗುವ ಸ್ವಾತಂತ್ರ್ಯವೂ ನನಗಿಲ್ಲದಾಗಿದೆ. ಹೋದಲ್ಲೆಲ್ಲಾ ಮುಖ ಮುಚ್ಚಿಕೊಳ್ಳಬೇಕಾಗಿದೆ’ ಎಂದು ಹೇಳಿದ್ದಾಳೆ. ಜತೆಗೆ ಮೋದಿಯವರನ್ನು ‘ಹೇಡಿ’ ಎಂದು ಕರೆದಿದ್ದು, ‘ನಾನು ಹಿಂದೆ ಸರಿಯುವುದಿಲ್ಲ’ ಎಂದು ಸವಾಲು ಹಾಕಿದ್ದಾಳೆ.

ನೀಟ್‌-ಪಿಜಿ ಪರೀಕ್ಷೆ ವೇಳೆ ಮತ್ತೆಮತ್ತೆ ಕರೆಂಟ್‌ ಕಟ್‌:

ನವದೆಹಲಿ: ನೀಟ್‌-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೇಶದಲ್ಲಿ ಭಾರೀ ಕೋಲಾಹಲವೆದ್ದು ಸಚಿವರೊಬ್ಬರ ಪದತ್ಯಾಗಕ್ಕೆ ಕಾರಣವಾದ ಬೆನ್ನಲ್ಲೇ, ಭಾನುವಾರ ಜೈಪುರದಲ್ಲಿ ನಡೆದ ನೀಟ್‌-ಪಿಜಿ ಪರೀಕ್ಷೆ ವೇಳೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿ ಅಭ್ಯರ್ಥಿಗಳು ಸಿಟ್ಟಿಗೆದ್ದಿದ್ದರು. ಇದರ ಬೆನ್ನಲ್ಲೇ ಘಟನೆಗೆ ಕಾರಣ ಪತ್ತೆಗೆಂದು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ 3 ಸದಸ್ಯರ ತನಿಖಾ ಸಮಿತಿ ರಚಿಸಿದೆ. ಪರೀಕ್ಷೆ ಆರಂಭವಾದ ಬಳಿಕ ಹಲವು ಬಾರಿ ವಿದ್ಯುತ್‌ ಕೈಕೊಟ್ಟ ಕಾರಣ ಮತ್ತು ಲಾಗ್‌ಇನ್‌ ಆಗುವಾಗ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ವಿದ್ಯಾರ್ಥಿಗಳು ಸರಾಗವಾಗಿ ಪರೀಕ್ಷೆ ಬರೆಯಲಾಗಿರಲಿಲ್ಲ. ಮರುಪರೀಕ್ಷೆ ಸೆ.5ರಂದು ನಿಗದಿಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾಗವತ್‌ ವಿರುದ್ಧ ನ್ಯೂಯಾರ್ಕಲ್ಲಿ ಖಲಿಸ್ತಾನಿ ಉಗ್ರರಿಂದ ಪ್ರತಿಭಟನೆ
ಇಡ್ಲಿ ಮಾರುವ ಬೆಂಗಳೂರಿನ ನಿಂಗಮ್ಮಗೆ ಮೋದಿ ಶಹಬ್ಬಾಸ್!