ಕೀವ್: ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿಯೊಂದರ ಗೋದಾಮಿನ ಮೇಲೆ ರಷ್ಯಾದ ಕ್ಷಿಪಣಿ ದಾಳಿ ಮಾಡಿದೆ. ಈ ದಾಳಿ ಭಾರತ-ರಷ್ಯಾ ಸಂಬಂಧದ ಮೇಲೆ ಕೊಂಚ ಪರಿಣಾಮ ಬೀರಬಹುದು ಎನ್ನಲಾಗಿದೆ.
ಈ ನಡುವೆ, ‘ಇಂದು, ರಷ್ಯಾದ ಕ್ಷಿಪಣಿಯು ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ದಾಳಿ ಮಾಡಿದೆ. ಭಾರತದ ಜೊತೆ ‘ವಿಶೇಷ ಸ್ನೇಹ’ ಎಂದು ಹೇಳಿಕೊಳ್ಳುತ್ತಾ, ಮಾಸ್ಕೋ ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ. ಮಕ್ಕಳು ಮತ್ತು ವೃದ್ಧರಿಗೆ ಮೀಸಲಾದ ಔಷಧಿಗಳನ್ನು ನಾಶಪಡಿಸುತ್ತಿದೆ’ ಎಂದು ಉಕ್ರೇನ್‌ನ ರಾಯಭಾರ ಕಚೇರಿ ಕಿಡಿಕಾರಿದೆ.ಮೇ 9ಕ್ಕೆ ವಿಶ್ವಸಮರದ ವಿಜಯ ದಿವಸ ಆಚರಣೆಗೂ ಮುನ್ನ ಈ ದಾಳಿ ನಡೆದಿದೆ. ಇದಕ್ಕೆ ರಷ್ಯಾ ಸರ್ಕಾರ ಏನು ಪ್ರತಿಕ್ರಿಯೆ ನೀಡಲಿದೆ ಎಂಬುದು ಗಮನಾರ್ಹವಾಗಿದೆ.