ಮುಂಬೈ: ಭಾರತದ ಅತಿ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ‘ಶೋಲೆ’ ಚಿತ್ರ ಬಿಡುಗಡೆಯಾಗಿ ಶುಕ್ರವಾರ 50 ವರ್ಷ ಸಂದಿದೆ. ಈ ಚಿತ್ರವು ಆಗಸ್ಟ್ 15, 1975 ರಂದು ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿತ್ತು.
ರಮೇಶ್ ಸಿಪ್ಪಿ ನಿರ್ದೇಶಿಸಿದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಧರ್ಮೇಂದ್ರ, ಹೇಮಾ ಮಾಲಿನಿ, ಜಯಾ ಬಚ್ಚನ್, ಸಂಜೀವ್ ಕುಮಾರ್ ಮತ್ತು ಅಮ್ಜದ್ ಖಾನ್ ಅವರಂತಹ ತಾರೆಯರು ನಟಿಸಿದ್ದಾರೆ. ಇಂದಿಗೂ ಟೀವಿಗಳಲ್ಲಿ ಶೋಲೆ ಚಿತ್ರ ಹಾಕಿದರೆ ಜನರು ಕಣ್ಣು ಮಿಟುಕಿಸದೇ ನೋಡುತ್ತಾರೆ. ಇದೇ ಚಿತ್ರದ ವಿಶೇಷ. ಕರ್ನಾಟಕದ ರಾಮನಗರ ಜಿಲ್ಲೆಯ ಶಿಲಾ ಬೆಟ್ಟಗಳಲ್ಲಿ ಇದು ಚಿತ್ರೀಕರಣ ಆಗಿತ್ತು ಎಂಬುದು ಗಮನಾರ್ಹ.