2024ರ ಚುನಾವಣೆ ಕಠಿಣ: ಕಾಂಗ್ರೆಸ್‌ಗೆ ಶಿವಸೇನೆ ಎಚ್ಚರಿಕೆ

KannadaprabhaNewsNetwork |  
Published : Dec 11, 2023, 01:15 AM IST
ಶಿವಸೇನೆ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಹೊಗಳುಭಟರು ಕಾಂಗ್ರೆಸ್‌ನಲ್ಲೇ ಇದ್ದಾರೆ. ಅವರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾದಿ ಕಠಿಣವಾಗಲಿದೆ ಎಂದು ಶಿವಸೇನೆ ವಕ್ತಾರ ಸಂಜಯ ರಾವುತ್‌ ಎಚ್ಚರಿಸಿದ್ದಾರೆ.

ಮೋದಿಯ ಹೊಗಳುಭಟರು ಕಾಂಗ್ರೆಸ್ಸಲ್ಲೇ ಇದ್ದಾರೆಕಮಲ್‌ನಾಥ್‌ ಉಲ್ಲೇಖಿಸಿ ರಾವುತ್‌ ಪರೋಕ್ಷ ಟಾಂಗ್‌

ಪಿಟಿಐ ಮುಂಬೈ

ಪ್ರಧಾನಿ ನರೇಂದ್ರ ಮೋದಿ ಅವರ ಹೊಗಳುಭಟರು ಕಾಂಗ್ರೆಸ್‌ನಲ್ಲೇ ಇದ್ದಾರೆ. ಅವರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾದಿ ಕಠಿಣವಾಗಲಿದೆ ಎಂದು ಶಿವಸೇನೆ ವಕ್ತಾರ ಸಂಜಯ ರಾವುತ್‌ ಎಚ್ಚರಿಸಿದ್ದಾರೆ.ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ‘ಲೋಕಠೋಕ್‌’ನಲ್ಲಿ ಕಟು ಅಭಿಪ್ರಾಯ ಹೊರಹಾಕಿರುವ ರಾವುತ್‌, ಕಾಂಗ್ರೆಸ್‌ ಪಕ್ಷವು ಬಿಜೆಪಿ ಸೋಲಿಸಲಾಗದು ಎಂಬುದು ಬರೀ ಮಿಥ್ಯೆ. 2018ರಲ್ಲಿ ಕಾಂಗ್ರೆಸ್‌ ಹಲವು ರಾಜ್ಯಗಳಲ್ಲಿ ಬಿಜೆಪಿ ಮಣಿಸಿದ್ದು ಇದಕ್ಕೆ ಸಾಕ್ಷಿ. ಈ ಸಲವೂ 3 ರಾಜ್ಯಗಳಲ್ಲಿ ಬಿಜೆಪಿ ಎದುರು ಅತ್ಯಲ್ಪ ಅಂತರದಲ್ಲಿ ಕಾಂಗ್ರೆಸ್‌ ಸೋತಿದೆ. ಆದರೆ 2024ರ ಚುನಾವಣೆಯಲ್ಲಿ ಮೋದಿ ಸುತ್ತಲಿನ ಕಾಂಗ್ರೆಸ್‌ನಲ್ಲಿನ ಹೊಗಳುಭಟರ ಬಗ್ಗೆ ಪಕ್ಷ ಎಚ್ಚರಿಕೆ ವಹಿಸಬೇಕು’ ಎಂದರು. ಈ ಮೂಲಕ ಮೋದಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನಲಾದ ಮಧ್ಯಪ್ರದೇಶ ಕಾಂಗ್ರೆಸ್‌ ಮುಖಂಡ ಕಮಲ್‌ನಾಥ್‌ ಬಗ್ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.ಇನ್ನು ಇವಿಎಂ (ಮತಯಂತ್ರ) ಬಗ್ಗೆಯೂ ಸಂದೇಹ ವ್ಯಕ್ತಪಡಿಸಿರುವ ಅವರು, ‘ಮಧ್ಯಪ್ರದೇಶದಲ್ಲಿ ಅಂಚೆ ಮತ ಎಣಿಕೆ ವೇಳೆ 199 ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಂದಿತ್ತು. ಆದರೆ ಇವಿಎಂ ತೆರೆದಾಗ ಬಿಜೆಪಿ ಮುನ್ನಡೆ ಸಾಧಿಸಿತು’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗೂಗಲ್‌ ಸಿಇಒಪಿಚೈಗೆ 3 ವರ್ಷಕ್ಕೆ 6300 ಕೋಟಿ ರು. ವೇತನ, ಭತ್ಯೆ!
ಸ್ತ್ರೀಯರಿಗೆ ₹2500, ಮದ್ವೆಗೆ ಚಿನ್ನ, ಫ್ರೀ ಎಲ್‌ಪಿಜಿ; ವಿಜಯ್‌ ವಿಜಯ್‌ ಘೋಷಣೆ