ಟ್ರಿಬ್ಯುನಲ್‌ ಅಧ್ಯಕ್ಷ, ಸದಸ್ಯರ ಅವಧಿ 4 ವರ್ಷಕ್ಕಿಳಿಸಿದ್ದ ಕಾನೂನು ರದ್ದು

KannadaprabhaNewsNetwork |  
Published : Nov 20, 2025, 12:30 AM IST
ಸುಪ್ರೀಂ | Kannada Prabha

ಸಾರಾಂಶ

ಅಧ್ಯಕ್ಷರು, ಸದಸ್ಯರಿಗೆ ಕನಿಷ್ಠ, ಗರಿಷ್ಠ ವಯೋಮಿತಿ, ಅಧಿಕಾರಾವಧಿ ನಿಗದಿ ಸೇರಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಅನೇಕ ನಿಬಂಧನೆಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಮಾಡಿದೆ.ಅಲ್ಲದೆ, ‘ಕೋರ್ಟ್‌ ಆದೇಶಗಳನ್ನೆಲ್ಲ ಸಂಸತ್ತು ಬುಡಮೇಲು ಮಾಡಲಾಗದು’ ಎಂದು ಖಡಕ್ಕಾಗಿ ಹೇಳಿದೆ. ಈ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆ ಆಗಿದೆ.

2021ರ ಟ್ರಿಬ್ಯೂನಲ್‌ಗಳ ಸುಧಾರಣಾ ಕಾಯ್ದೆ ರದ್ದು

ಎಲ್ಲ ಕೋರ್ಟ್‌ ಆದೇಶಗಳನ್ನು ಸಂಸತ್ತು ಬುಡಮೇಲು ಮಾಡಲಾಗದು

ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರಕ್ಕೆ ಭಾರೀ ಹಿನ್ನಡೆನವದೆಹಲಿ: ಅಧ್ಯಕ್ಷರು, ಸದಸ್ಯರಿಗೆ ಕನಿಷ್ಠ, ಗರಿಷ್ಠ ವಯೋಮಿತಿ, ಅಧಿಕಾರಾವಧಿ ನಿಗದಿ ಸೇರಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಅನೇಕ ನಿಬಂಧನೆಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಮಾಡಿದೆ.ಅಲ್ಲದೆ, ‘ಕೋರ್ಟ್‌ ಆದೇಶಗಳನ್ನೆಲ್ಲ ಸಂಸತ್ತು ಬುಡಮೇಲು ಮಾಡಲಾಗದು’ ಎಂದು ಖಡಕ್ಕಾಗಿ ಹೇಳಿದೆ. ಈ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆ ಆಗಿದೆ.

‘ಈ ಹಿಂದೆ ನಾವು ಅಸಾಂವಿಧಾನಿಕ ಎಂದು ರದ್ದು ಮಾಡಿದ್ದ ನ್ಯಾಯಮಂಡಳಿಗಳ ಸುಧಾರಣಾ ಅಧಿಸೂಚನೆಯಲ್ಲಿರುವ ಅಂಶಗಳನ್ನೇ ಸಣ್ಣ ಪುಟ್ಟ ತಿದ್ದುಪಡಿಗಳೊಂದಿಗೆ 2021ರ ಕಾಯ್ದೆಯಲ್ಲಿ ಮರು ಜಾರಿಗೊಳಿಸಲಾಗಿದೆ. ಇದು ಸಂವಿಧಾನದಲ್ಲಿ ಹೇಳಲಾದ ಅಧಿಕಾರದ ಪ್ರತ್ಯೇಕತೆ, ನ್ಯಾಯಾಂಗ ಸ್ವಾತಂತ್ರ್ಯದ ತತ್ವಗಳ ಸ್ಪಷ್ಟ ಉಲ್ಲಂಘನೆ’ ಎಂದು ಎಂದು ಕೋರ್ಟ್ ಹೇಳಿದೆ.

2020ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮಂಡಳಿಗಳ ಸದಸ್ಯರು, ಅಧ್ಯಕ್ಷರ ಅಧಿಕಾರಾವಧಿಯನ್ನು 5 ವರ್ಷಕ್ಕೆ ನಿಗದಿಪಡಿಸುವಂತೆ ಆದೇಶಿತ್ತು. ಆದರೆ, 2021ರಲ್ಲಿ ಈ ಕುರಿತು ಅಧಿಸೂಚನೆ ಹೊರಡಿಸಿದ ಸರ್ಕಾರವು ಅಧ್ಯಕ್ಷರು, ಸದಸ್ಯರ ಅಧಿಕಾರಾವಧಿಯನ್ನು 4 ವರ್ಷಕ್ಕೆ ಸೀಮಿತಗೊಳಿಸಿತ್ತು. ಈ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ ನಂತರ ರದ್ದು ಮಾಡಿದ್ದು, ಆ ಬಳಿಕ ಈ ಅಧಿಸೂಚನೆಗೆ ಕೆಲ ತಿದ್ದುಪಡಿಗಳನ್ನು ತಂದು 2021ರ ನ್ಯಾಯಾಧಿಕರಣಗಳ ಸುಧಾರಣಾ ಕಾಯ್ದೆ ಜಾರಿ ತರಲಾಗಿತ್ತು.

ಏನೇನು ಬದಲಾವಣೆ ಮಾಡಿತ್ತು ಕೇಂದ್ರ?:

ಅಧಿಕಾರಾವಧಿ ಜತೆಗೆ ನ್ಯಾಯಮಂಡಳಿ ಸದಸ್ಯರು, ಅಧ್ಯಕ್ಷರ ಕನಿಷ್ಠ ವಯೋಮಿತಿ 50 ವರ್ಷಕ್ಕೆ ನಿಗದಿ, ಅಧ್ಯಕ್ಷರಿಗೆ ಗರಿಷ್ಠ ವಯೋಮಿತಿ 70 ವರ್ಷ, ಸದಸ್ಯರಿಗೆ 67 ವರ್ಷ ಎಂದು ನಿಗದಿಪಡಿಸಿತ್ತು. ಜತೆಗೆ, ಈ ನ್ಯಾಯಮಂಡಳಿಗೆ ಇಬ್ಬರ ಹೆಸರು ಸೂಚಿಸಲು ಆಯ್ಕೆ ಸಮಿತಿಗೆ ಅ‍ವಕಾಶ ನೀಡಿ, ಅದರಲ್ಲಿ ಒಂದು ಹೆಸರನ್ನು ಸರ್ಕಾರವೇ ಅಂತಿಮಗೊಳಿಸುವ ಅಧಿಕಾರ ನೀಡಲಾಗಿತ್ತು.

ಇದನ್ನು ಮದ್ರಾಸ್‌ ಬಾರ್‌ ಅಸೋಸಿಯೇಷನ್‌, ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಮತ್ತು ಇತರರು ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಿದ್ದರು.

ನ್ಯಾಯಮಂಡಳಿಗಳೂ ಅರೆ ನ್ಯಾಯಾಂಗ ವ್ಯವಸ್ಥೆಯಾಗಿದ್ದು, ನೀರಾವರಿ, ತೆರಿಗೆ ಸೇರಿ ಹಲವು ವಿಚಾರಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಕಾರಣ ಇವುಗಳನ್ನು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರಿಸುವ ಅಗತ್ಯವಿದೆ ಎಂದು ಅರ್ಜಿದಾರರು ಆಗ್ರಹಿಸಿದ್ದರು.

==ತ್ರಿವಳಿ ತಲಾಖ್‌ ಬಳಿಕ ಇದೀಗ ತಲಾಖ್‌ ಎ ಹಸನ್‌ಗೆ ನಿಷೇಧ?

ತಿಂಗಳಿಗೊಂದರಂತೆ 3 ಬಾರಿ ತಲಾಖ್‌ ಹೇಳುವ ಪದ್ಧತಿ

ಮಹಿಳೆಯರ ಘನತೆ ಹಾಳಾಗಲು ಬಿಡಲ್ಲ: ಸುಪ್ರೀಂ

ತ್ರಿವಳಿ ತಲಾಖ್‌ ಕಾನೂನು ಬಾಹಿರ ಎಂದು 2019ರಲ್ಲಿ ಸಂಸತ್‌ನಲ್ಲಿ ಮಸೂದೆ ಅಂಗೀಕರಿಸಿದ್ದ ಕೇಂದ್ರ ಸರ್ಕಾರ

ಆದರೆ ತಲಾಖ್‌ ಎ ಹಸನ್‌ ಪದ್ಧತಿ ಈಗಲೂ ಜೀವಂತ. ಇದು ಪತಿ ಪತ್ನಿಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಬಗೆ

ಇದನ್ನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿದೆ. ಈ ಅರ್ಜಿ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ

ಈ ವೇಳೆ ಪದ್ಧತಿ ಬಗ್ಗೆ ಪೀಠ ಆಕ್ಷೇಪ. ನ್ಯಾಯಾಂಗದ ಮಧ್ಯಪ್ರವೇಶ ಅಗತ್ಯ ಎಂದು ಅಭಿಪ್ರಾಯ. ಪದ್ಧತಿ ರದ್ದತಿ ಸುಳಿವು

ನವದೆಹಲಿ: ಮುಸ್ಲಿಂ ಪುರುಷನು ತಿಂಗಳಿಗೆ ಒಂದು ಸಲದಂತೆ ಸತತ 3 ತಿಂಗಳವರೆಗೆ ‘ತಲಾಖ್’ ಹೇಳುವ ಮೂಲಕ ವಿವಾಹ ವಿಚ್ಛೇದನ ನೀಡುವ ಪದ್ಧತಿಯಾದ ‘ತಲಾಖ್-ಎ-ಹಸನ್’ ಅನ್ನು ರದ್ದುಗೊಳಿಸುವ ಇಂಗಿತವನ್ನು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದೆ. ಈ ವಿಷಯವನ್ನು 5 ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಉಲ್ಲೇಖಿಸಲು ಗಂಭೀರ ಚಿಂತನೆ ನಡೆಸಲಾಗುತ್ತದೆ ಎಂದಿದೆ.ಇದರ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ‘ಈ ಪದ್ಧತಿಯು ಒಟ್ಟಾರೆಯಾಗಿ ಸಮಾಜದ ಮೇಲೆ ಪರಿಣಾಮ ಬೀರುವುದರಿಂದ, ನ್ಯಾಯಾಂಗ ಹಸ್ತಕ್ಷೇಪ ಅಗತ್ಯವಾಗಬಹುದು. ನಾಗರಿಕ ಸಮಾಜವು ಮಹಿಳೆಯರ ಘನತೆಯನ್ನು ಹಾಳುಮಾಡುವ ಪದ್ಧತಿಗಳನ್ನು ಅನುಮತಿಸಲು ಸಾಧ್ಯವಿಲ್ಲ’ ಎಂದು ಹೇಳಿತು.

ಏನಿದು ತಲಾಖ್ ಎ ಹಸನ್?:ಈಗಾಗಲೇ ತ್ರಿವಳಿ ತಲಾಖ್‌ ಅನ್ನು ಭಾರತ ಸರ್ಕಾರ ಈ ಹಿಂದೆಯೇ ನಿರ್ಬಂಧಿಸಿದೆ. ಅದು ಒಮ್ಮೆಗೇ ‘ತಲಾಖ್‌, ತಲಾಖ್‌, ತಲಾಖ್‌’ ಎಂದು 3 ಸಲ ಹೇಳುವ ಪದ್ಧತಿಯಾಗಿದೆ. ಆದರೆ ತಿಂಗಳಿಗೆ ಒಂದರಂತೆ 3 ಸಲ ತಲಾಖ್ ಹೇಳುವುದನ್ನು ‘ತಲಾಖ್ ಎ ಹಸನ್‌’ ಎನ್ನುತ್ತಾರೆ. ತಲಾಖ್‌ ಎ ಹಸನ್‌ ಪದ್ಧತಿಯಲ್ಲಿ ಪತಿ- ಪತ್ನಿ ತಮ್ಮ ಮುನಿಸು ಮರೆತು ಒಂದಾಗಲು ಅವಕಾಶ ಇರುತ್ತದೆ. ಮೂರು ತಿಂಗಳಲ್ಲಿ ಒಮ್ಮೆಯೂ ಪತಿ- ಪತ್ನಿ ಒಂದಾಗುವ ಮನಸ್ಸು ಮಾಡದೇ ಇದ್ದರೆ ಮೂರು ತಿಂಗಳ ಬಳಿಕ ಪತಿ- ಪತ್ನಿ ಬೇರಾಗುತ್ತಾರೆ

PREV

Recommended Stories

ಇಂದು 10ನೇ ಸಲ ನಿತೀಶ್ ಬಿಹಾರ ಸಿಎಂ
ಸತ್ಯ ಸಾಯಿಬಾಬಾ ಬೋಧನೆ ಕೋಟ್ಯಂತರ ಭಕ್ತರಿಗೆ ದಾರಿದೀಪ: ಮೋದಿ