ಸುಪ್ರೀಂನಿಂದ್ಲೂ ಮಿತವ್ಯಯ ಮಂತ್ರ: 50% ಸಿಬ್ಬಂದಿಗೆ ವರ್ಕ್‌ ಫ್ರಂ ಹೋಂ

KannadaprabhaNewsNetwork |  
Published : May 16, 2026, 03:15 AM IST
Supreme Court

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಮಿತವ್ಯಯಕ್ಕೆ ನ್ಯಾಯಾಂಗದಿಂದಲೂ ಬೆಂಬಲ ವ್ಯಕ್ತವಾಗಿದ್ದು ಸುಪ್ರೀಂಕೋರ್ಟ್‌ ಶೇ.50ರಷ್ಟು ಸಿಬ್ಬಂದಿಗೆ ವಾರಕ್ಕೆ 2 ದಿನ ವರ್ಕ್‌ಫ್ರಮ್‌ ಹೋಮ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಜೊತೆಗೆ ನ್ಯಾಯಮೂರ್ತಿಗಳ ನಡುವೆ ಕಾರ್‌ಪೂಲಿಂಗ್‌ಗೂ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

 ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಮಿತವ್ಯಯಕ್ಕೆ ನ್ಯಾಯಾಂಗದಿಂದಲೂ ಬೆಂಬಲ ವ್ಯಕ್ತವಾಗಿದ್ದು ಸುಪ್ರೀಂಕೋರ್ಟ್‌ ಶೇ.50ರಷ್ಟು ಸಿಬ್ಬಂದಿಗೆ ವಾರಕ್ಕೆ 2 ದಿನ ವರ್ಕ್‌ಫ್ರಮ್‌ ಹೋಮ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಜೊತೆಗೆ ನ್ಯಾಯಮೂರ್ತಿಗಳ ನಡುವೆ ಕಾರ್‌ಪೂಲಿಂಗ್‌ಗೂ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಸುಪ್ರೀಂಕೋರ್ಟ್‌ ಶುಕ್ರವಾರ ಸುತ್ತೋಲೆ

ಈ ಬಗ್ಗೆ ಸುಪ್ರೀಂಕೋರ್ಟ್‌ ಶುಕ್ರವಾರ ಸುತ್ತೋಲೆ ಹೊರಡಿಸಿದ್ದು, ‘ಸೋಮವಾರ, ಶುಕ್ರವಾರ ಅಥವಾ ಇತರ 2 ದಿನಗಳಲ್ಲಿ ಪಟ್ಟಿ ಮಾಡಲಾದ ಪ್ರಕರಣಗಳನ್ನು ಆನ್‌ಲೈನ್‌ ಮೂಲಕ ನಡೆಸಬೇಕು.

ಮುಂದಿನ ಆದೇಶದವರೆಗೆ ವಾರಕ್ಕೆ 2 ದಿನಗಳವರೆಗೆ ಮನೆಯಿಂದ ಕೆಲಸ

 ಮುಂದಿನ ಆದೇಶದವರೆಗೆ ಪ್ರತಿ ಶಾಖೆ ಅಥವಾ ನೋಂದಣಿ ವಿಭಾಗದಲ್ಲಿ ಶೇ.50ರಷ್ಟು ಸಿಬ್ಬಂದಿಗೆ ವಾರಕ್ಕೆ 2 ದಿನಗಳವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶವಿದೆ. ಅಗತ್ಯವಿದ್ದಲ್ಲಿ, ಯಾವುದೇ ಸಮಯದಲ್ಲಿ ಕಚೇರಿಗೆ ಹಾಜರಾಗಲು ಸಿದ್ಧರಾಗಿರಬೇಕು’ ಎಂದು ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇನ್ನು ಮುಂದೆ ಪಿಎಫ್‌ಗೆ ಮಾಸಿಕ 1,800 ಕಡಿತ ಕಡ್ಡಾಯ!
ಅಯೋಧ್ಯೆ ಅಕ್ರಮ : ವಕೀಲರ ಭಾರಿ ಪ್ರತಿಭಟನೆ