14 ವರ್ಷಗಳ ವನವಾಸ ಪೂರೈಸಿ, ಶ್ರೀ ರಾಮ ತಮ್ಮ ರಾಜ್ಯಕ್ಕೆ ವಿಜಯಶಾಲಿಯಾಗಿ ಮರಳಿದ ಸಂದರ್ಭವನ್ನು ಅಯೋಧ್ಯೆಯಲ್ಲಿ 36 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಸ್ಮರಿಸಿ ಆಚರಿಸಲಾಯಿತು.
- ಕಳೆದ ಸಲದ ತನ್ನದೇ 26 ಲಕ್ಷ ದೀಪಗಳ ದಾಖಲೆ ಧ್ವಂಸಅಯೋಧ್ಯೆ: 14 ವರ್ಷಗಳ ವನವಾಸ ಪೂರೈಸಿ, ಶ್ರೀ ರಾಮ ತಮ್ಮ ರಾಜ್ಯಕ್ಕೆ ವಿಜಯಶಾಲಿಯಾಗಿ ಮರಳಿದ ಸಂದರ್ಭವನ್ನು ಅಯೋಧ್ಯೆಯಲ್ಲಿ 36 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಸ್ಮರಿಸಿ ಆಚರಿಸಲಾಯಿತು. ನಗರದ ಪ್ರಮುಖ ಘಾಟ್, ರಸ್ತೆ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಲಕ್ಷಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಾಣದ ಯತ್ನವೂ ನಡೆದಿದೆ. ಕಳೆದ ವರ್ಷ 26 ಲಕ್ಷ ದೀಪ ಬೆಳಗುವ ಮೂಲಕ ದಾಖಲೆ ಸೃಷ್ಟಿಸಲಾಗಿತ್ತು.
ಈ ವೇಳೆ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಸಿಎಂ ಯೋಗಿ ಆದಿತ್ಯನಾಥ್ ಸೇರಿ ಅನೇಕರು ಉಪಸ್ಥಿತರಿದ್ದರು.ದೀಪೋತ್ಸವದ ವೈಭವವನ್ನು ಕಣ್ತುಂಬಿಕೊಂಡ ಜಗದ್ಗುರು ಸ್ವಾಮಿ ಸತೀಶಾಚಾರ್ಯ ಮಹಾರಾಜ್ ಅವರು, ‘ಶ್ರೀರಾಮ ಅಯೋಧ್ಯೆಗೆ ಮರಳಿದಾಗ ನಗರವನ್ನು ದೀಪಗಳಿಂದ ಬೆಳಗಿಸಲಾಗಿದ್ದಂತೆ. ಇಂದು ಸಿಎಂ ಯೋಗಿ ಆದಿತ್ಯನಾಥ್ ಅವರಿಂದಾಗಿ ಅದೇ ವೈಭವ ಮರಳಿದೆ’ ಎಂದು ಹೇಳಿದ್ದಾರೆ. ಶಶಿಕಾಂತ್ ದಾಸ್ ಮಹಾರಾಜ್, ಸಂತ ಆಕಾಶ್ ದಾಸ್ ಮಹಾರಾಜ್ ಕೂಡ ದೀಪೋತ್ಸವದಲ್ಲಿ ಭಾಗಿಯಾಗಿದ್ದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.