74000ದ ಗಡಿ ದಾಟಿದ ಸೆನ್ಸೆಕ್ಸ್‌: ಸಾರ್ವಕಾಲಿಕ ದಾಖಲೆ

KannadaprabhaNewsNetwork | Updated : Mar 07 2024, 08:09 AM IST

ಸಾರಾಂಶ

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಬುಧವಾರ 408 ಅಂಕಗಳ ಏರಿಕೆ ಕಂಡು 74085ರಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ 74000 ಅಂಕಗಳ ಗಡಿದಾಟಿದ್ದು ಇದೇ ಮೊದಲು ಮತ್ತು ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಕೂಡಾ ಹೌದು.

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಬುಧವಾರ 408 ಅಂಕಗಳ ಏರಿಕೆ ಕಂಡು 74085ರಲ್ಲಿ ಮುಕ್ತಾಯವಾಗಿದೆ.

 ಸೆನ್ಸೆಕ್ಸ್‌ 74000 ಅಂಕಗಳ ಗಡಿದಾಟಿದ್ದು ಇದೇ ಮೊದಲು ಮತ್ತು ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಕೂಡಾ ಹೌದು. ಇನ್ನೊಂದೆಡೆ ನಿಫ್ಟಿ ಕೂಡಾ 117 ಅಂಕ ಏರಿಕೆ 22474ರಲ್ಲಿ ಮುಕ್ತಾಯವಾಗಿದೆ. 

ದಿನದ ಆರಂಭದಲ್ಲಿ ಸೂಚ್ಯಂಕ ಕುಸಿತ ಕಂಡಿತ್ತಾದರೂ ಬಳಿಕ ಯುರೋಪ್‌ ಮಾರುಕಟ್ಟೆಗಳ ಏರಿಕೆ ಮತ್ತು ಖಾಸಗಿ ಬ್ಯಾಂಕ್‌ ಮತ್ತು ಫಾರ್ಮಾ ಕಂಪನಿಗಳ ಷೇರುಗಳ ಬೆಲೆ ಏರಿಕೆ ಎರಡು ಸೂಚ್ಯಂಕಗಳ ಏರಿಕೆಗೆ ಕಾರಣವಾಯ್ತು.

ಕಳೆದ ಜ.17ರಂದು ಸೆನ್ಸೆಕ್ಸ್‌ 73000 ಅಂಕಗಳ ಗಡಿ ದಾಟಿತ್ತು. ಬಳಿಕ ಜನವರಿ ಅಂತ್ಯದ ವೇಳೆಗೆ 70000 ಅಂಕಗಳವರೆಗೆ ಕುಸಿತ ಕಂಡಿತ್ತು. 

ನಂತರದ ದಿನಗಳಲ್ಲಿ ಮತ್ತೆ ಆರ್ಥಿಕತೆ ಚೇತರಿಕೆ, ಹಣದುಬ್ಬರ ಭೀತಿ ಕಡಿಮೆ, ಕಚ್ಚಾತೈಲ ಬೆಲೆ ಕುಸಿತ, ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಸುಳಿವುಗಳು ಸೆನ್ಸೆಕ್ಸ್‌ ಅನ್ನು ಏರುಗತಿಯಲ್ಲಿ ಕೊಂಡೊಯ್ದಿವೆ.

Share this article