ಪಾಕ್‌ ಸೇನೆಯ ನಕಲಿ ಜಯಕ್ಕೆ ನಕಲಿ ಫೋಟೋ ಗಿಫ್ಟ್!

KannadaprabhaNewsNetwork |  
Published : May 26, 2025, 11:46 PM ISTUpdated : May 27, 2025, 04:47 AM IST
ಫೋಟೋ  | Kannada Prabha

ಸಾರಾಂಶ

ಉಗ್ರರನ್ನು ಛೂಬಿಟ್ಟು ಭಾರತವನ್ನು ಕೆಣಕಿ ಸರಿಯಾಗಿ ಪೆಟ್ಟುತಿಂದಿರುವ ಪಾಕಿಸ್ತಾನ, ಮಾಡದ ಸಾಹಸಕ್ಕೆ ತನ್ನ ಬೆನ್ನನ್ನು ತಾನೇ ತಟ್ಟಿ ನಗೆಪಾಟಲಿಗೀಡಾಗುವ ಚಾಳಿಯನ್ನು ಮುಂದುವರೆಸಿದೆ.

ಇಸ್ಲಾಮಾಬಾದ್‌: ಉಗ್ರರನ್ನು ಛೂಬಿಟ್ಟು ಭಾರತವನ್ನು ಕೆಣಕಿ ಸರಿಯಾಗಿ ಪೆಟ್ಟುತಿಂದಿರುವ ಪಾಕಿಸ್ತಾನ, ಮಾಡದ ಸಾಹಸಕ್ಕೆ ತನ್ನ ಬೆನ್ನನ್ನು ತಾನೇ ತಟ್ಟಿ ನಗೆಪಾಟಲಿಗೀಡಾಗುವ ಚಾಳಿಯನ್ನು ಮುಂದುವರೆಸಿದೆ.

ಭಾರತದ ಆಪರೇಷನ್‌ ಸಿಂದೂರಕ್ಕೆ ಪ್ರತಿಯಾಗಿ ನಡೆಸಿದ ‘ಬುನ್ಯಾದ್-ಉಲ್-ಮರ್ಸಸ್’ ಹೆಸರಿನ ಯಶಸ್ವಿ ಕಾರ್ಯಾಚರಣೆಯ ಸ್ಮರಣಾರ್ಥ, ಆ ಕಾರ್ಯಾಚರಣೆಯದ್ದೆಂದು ಹೇಳಿಕೊಂಡು ನಕಲಿ ಫೋಟೋವೊಂದನ್ನು ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಫೀಲ್ಡ್‌ಮಾರ್ಷಲ್‌ ಅಸೀಂ ಮುನೀರ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.

ಭಾರತದೊಂದಿಗಿನ ಸೇನಾ ಸಂಘರ್ಷದ ಸಮಯದಲ್ಲಿ ರಾಜಕೀಯ ನಾಯಕರ ದೂರದೃಷ್ಟಿಯನ್ನು ಸಂಭ್ರಮಿಸಲು ಕಳೆದ ವಾರ ಮುನೀರ್ ಆಯೋಜಿಸಿದ್ದ ಉನ್ನತ ಮಟ್ಟದ ಭೋಜನಕೂಟದಲ್ಲಿ ಇದನ್ನು ನೀಡಲಾಗಿದೆ.

ಫೋಟೋದ ಅಸಲಿಯತ್ತೇನು?:

ಕಾರ್ಯಾಚರಣೆಯದ್ದು ಎಂದು ಹೇಳಿ ಮುನೀರ್‌ಗೆ ನೀಡಲಾಗಿರುವ ಫೋಟೋ, 2019ರಲ್ಲಿ ಚೀನಾ ನಡೆಸಿದ್ದ ಸಮರಾಭ್ಯಾಸದ್ದು ಎನ್ನಲಾಗಿದೆ. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ‘ನಿಮ್ಮ ವಿಜಯ ತೋರಿಸಿಕೊಳ್ಳಲು ಚೀನಾದ ಚಿತ್ರಗಳು ಬೇಕಾದಾಗ, ಇದು ತಂತ್ರವಲ್ಲ, ರಾಷ್ಟ್ರೀಯ ಮುಜುಗರ’, ಎಂದು ಬಿಜೆಪಿ ನಾಯಕ ಬಿ.ಎಲ್. ಶ್ರೀನಿವಾಸ್ ಸೋಲಂಕಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಇನ್ನೂ ಕೆಲವರು, ಭಾರತದ ವಿರುದ್ಧ ಗೆಲ್ಲಲು ಪಾಕ್‌ ಫೋಟೋಶಾಪ್‌, ಕ್ಯಾನ್ವಾ ಬಳಸುತ್ತಿದೆ ಎಂದು ಕಾಲೆಳೆಯುತ್ತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ