ಮುಂಬೈ: ಭಾನುವಾರ ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಅಂತ್ಯಗೊಳ್ಳಲಿದೆ. ಇದು ಇಂಡಿಯಾ ಕೂಟದ ಶಕ್ತಿ ಪ್ರದರ್ಶನಕ್ಕೆ ಬೃಹತ್ ವೇದಿಕೆ ಆಗಲಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಇದರಲ್ಲಿ ಭಾಗವಹಿಸಲಿದ್ದಾರೆ.
ಗಾಂಧಿ ಭಾನುವಾರ ಬೆಳಿಗ್ಗೆ ಮುಂಬೈನ ಮಣಿ ಭವನದಿಂದ ಆಗಸ್ಟ್ ಕ್ರಾಂತಿ ಮೈದಾನದವರೆಗೆ ‘ನ್ಯಾಯ ಸಂಕಲ್ಪ ಪಾದಯಾತ್ರೆ’ ಕೈಗೊಳ್ಳಲಿದ್ದಾರೆ.
ರಾಹುಲ್ ಪೂರ್ವ ಭಾರತದಿಂದ ಪಶ್ಚಿಮ ಭಾರತಕ್ಕೆ ಕೈಗೊಂಡ ಯಾತ್ರೆ ಹಿಂಸಾಪೀಡಿತ ಮಣಿಪುರದಿಂದ 2 ತಿಂಗಳ ಹಿಂದೆ ಆರಂಭವಾಗಿತ್ತು.
ಇದು ರಾಹುಲ್ ದಕ್ಷಿಣದಿಂದ ಉತ್ತರಕ್ಕೆ ಕೈಗೊಂಡ ಯಾತ್ರೆಯ 2ನೇ ಚರಣವಾಗಿತ್ತು. ಮೊದಲ ಚರಣ ಕೇವಲ ಪಾದಯಾತ್ರೆ ಆಗಿದ್ದರೆ, 2ನೇ ಚರಣ ಪಾದಯಾತ್ರೆ ಹಾಗೂ ವಾಹನಯಾತ್ರೆಯ ಮಿಶ್ರಣವಾಗಿತ್ತು.