ಶ್ರಾಫ್‌ ಅಲ್ಲ ಟಾರ್ಗೆಟ್, ಮತ್ತೊಬ್ಬ ಸೆಲೆಬ್ರಿಟಿ ಗುರಿ!

Published : Oct 22, 2026, 10:50 AM IST
tiger shroff

ಸಾರಾಂಶ

ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಹತ್ಯೆಗೆ ಯತ್ನಿಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯತೊಡಗಿದೆ. ಶೂಟರ್‌ಗಳ ಗುರಿ ಬೇರೊಬ್ಬ ಸೆಲೆಬ್ರಿಟಿ ಆಗಿದ್ದರು. ಆದರೆ ಆ ಸೆಲೆಬ್ರಿಟಿಗೆ ಬಾರಿ ಭದ್ರತೆ ಇದ್ದ ಕಾರಣ ಭದ್ರತೆಯೇ ಇಲ್ಲದೇ ಓಡಾಡುತ್ತಿದ್ದ ಶ್ರಾಫ್‌ರತ್ತ ತಮ್ಮ ಗುರಿ ತಿರುಗಿಸಿದರು.

ಮುಂಬೈ: ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಹತ್ಯೆಗೆ ಯತ್ನಿಸಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯತೊಡಗಿದೆ. ಶೂಟರ್‌ಗಳ ಗುರಿ ಬೇರೊಬ್ಬ ಸೆಲೆಬ್ರಿಟಿ ಆಗಿದ್ದರು. ಆದರೆ ಆ ಸೆಲೆಬ್ರಿಟಿಗೆ ಬಾರಿ ಭದ್ರತೆ ಇದ್ದ ಕಾರಣ ಭದ್ರತೆಯೇ ಇಲ್ಲದೇ ಓಡಾಡುತ್ತಿದ್ದ ಶ್ರಾಫ್‌ರತ್ತ ತಮ್ಮ ಗುರಿ ತಿರುಗಿಸಿದರು. ಒಟ್ಟಿನಲ್ಲಿ ಹಂತಕರ ಉದ್ದೇಶ ಬಾಲಿವುಡ್ ಅನ್ನು ಬೆದರಿಸುವುದಾಗಿತ್ತು ಎಂದು ಮಹಾರಾಷ್ಟ್ರದ ಕ್ರೈಂ ಬ್ರಾಂಚ್‌ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಸೆರೆಸಿಕ್ಕ ದಾಳಿಕೋರ

ಸೆರೆಸಿಕ್ಕ ದಾಳಿಕೋರರಾದ ರೆಹಾನ್‌ ಆಲಿಯಾಸ್‌ ಸುಕ್ಕಾ, ಹೃತಿಕ್‌ ಕುರ್ಮಿ ಆಲಿಯಾಸ್‌ ರೋಷನ್‌ ಮತ್ತು ಅಪ್ರಾಪ್ತ ವಯಸ್ಕ ವಿಚಾರಣೆ ವೇಳೆ ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

ಹತ್ಯೆ ಮಾಡಲು ಸಾಧ್ಯವಿಲ್ಲ ಎನ್ನುವ ವಾಸ್ತವ ಅರಿವಿಗೆ ಬಂತು

ತಾವು ಗುರಿ ಇಟ್ಟಿದ್ದ ಪ್ರಭಾವಿ ವ್ಯಕ್ತಿಯ ಚಲನವಲನ ನಿರೀಕ್ಷಿಸಿದ ಶೂಟರ್‌ಗಳಿಗೆ ಅವರನ್ನು ಹತ್ಯೆ ಮಾಡಲು ಸಾಧ್ಯವಿಲ್ಲ ಎನ್ನುವ ವಾಸ್ತವ ಅರಿವಿಗೆ ಬಂತು. ಹೀಗಾಗಿ ಅವರು ಟೈಗರ್‌ ಶ್ರಾಫ್‌ ಮೇಲೆ ದಾಳಿ ನಡೆಸಲು ಮುಂದಾದರು. ಅಭಿಮಾನಿಯೊಬ್ಬರು ಹಂಚಿಕೊಂಡ ರೀಲ್ಸ್‌ನಲ್ಲಿ ಟೈಗರ್‌ ಶ್ರಾಫ್‌ ಅವರಿಗೆ ಬೆಂಗಾವಲು ಪಡೆ ಇಲ್ಲ ಎಂದು ಹೇಳಿದ್ದನ್ನು ಶೂಟರ್ಸ್‌ ಗಮನಿಸಿದ್ದರು. ಹೀಗಾಗಿ ಟೈಗರ್ ಶ್ರಾಫ್ ಅವರನ್ನು ಸುಲಭ ಗುರಿಯೆಂದು ಭಾವಿಸಿ, ಅವರತ್ತ ಗಮನ ಹರಿಸಿದರು. ಟೈಗರ್‌ ಶ್ರಾಫ್‌ ಅವರನ್ನು ಹತ್ಯೆಗೈದು ಬಾಲಿವುಡ್‌ ಅನ್ನು ಬೆದರಿಸುವ ಉದ್ದೇಶ ಅವರಿಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮುಂಬೈನಿಂದ ಆಸ್ಟ್ರೇಲಿಯಾಗೆ ಕಾರ್ಡೇಲಿಯಾ ಸ್ಕೈ ಕ್ರೂಸ್‌
ದಾಸ್‌, ರಾಂಕಾಗೆ ಬಿಡುಗಡೆ ಭಾಗ್ಯ-ಹೋರಾಟಕ್ಕೆ ಕರೆ ನೀಡಲ್ಲ ಎಂದು ಮುಚ್ಚಳಿಕೆ