ಬಾಲಿವುಡ್‌ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಶ್ರವಣದೋಷ!

KannadaprabhaNewsNetwork |  
Published : Jun 19, 2024, 01:02 AM IST
ಅಲ್ಕಾ ಯಾಗ್ನಿಕ್‌ | Kannada Prabha

ಸಾರಾಂಶ

ಬಾಲಿವುಡ್‌ನ ಖ್ಯಾತ ಹಿನ್ನಲೆ ಗಾಯಕಿ ಅಲ್ಕಾ ಯಾಗ್ನಿಕ್‌ (53) ಶ್ರವಣ ದೋಷದ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಮುಂಬೈ: ಬಾಲಿವುಡ್‌ನ ಖ್ಯಾತ ಹಿನ್ನಲೆ ಗಾಯಕಿ ಅಲ್ಕಾ ಯಾಗ್ನಿಕ್‌ (58) ಶ್ರವಣ ದೋಷದ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಅವರು, ‘ಸಂವೇದನಾ ನರಗಳ ನಷ್ಟ ದೋಷದಿಂದ ಬಳಲುತ್ತಿರುವ ನನಗೆ ಕಿವುಡತನ ಸಮಸ್ಯೆಯಿಂದ ಉಂಟಾಗಿದೆ. ಈ ದಿಢೀರ್ ಆಘಾತ ತಮಗೆ ಗೋಚರವಾಗಲಿಲ್ಲ. ಈಗ ಗೊತ್ತಾಗಿದೆ’ ಎಂದಿದ್ದಾರೆ.‘ಕೆಲವು ವಾರಗಳ ಹಿಂದೆ, ವಿಮಾನದಿಂದ ಹೊರ ಬರುತ್ತಿದ್ದ ಸಂದರ್ಭದಲ್ಲಿ ನನಗೆ ಏನೂ ಕೇಳದಂತ ಅನುಭವವಾಯಿತು. ವೈದ್ಯರ ಬಳಿ ತೋರಿಸಿದೆ. ಆಗ ಅವರು ವೈರಲ್ ಅಟ್ಯಾಕ್‌ನಿಂದ ಅಪರೂಪದ ಸಂವೇದನಾ ನರಗಳ ಶ್ರವಣ ದೋಷ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದು ಹೇಳಿದ್ದಾರೆ. ಇದರಿಂದ ಗುಣಮುಖವಾಗಲು ನಿಮ್ಮ ಪ್ರಾರ್ಥನೆ ಮುಖ್ಯ’ ಎಂದಿದ್ದಾರೆ.

ಇದರ ಜೊತೆಗೆ ಸಂಗೀತ ಕೇಳುವ ಸಂದರ್ಭದಲ್ಲಿ ಹೆಡ್‌ಫೋನ್‌ಗಳನ್ನು ಬಳಸುವಾಗ ಎಚ್ಚರವಾಗಿರಿ ಎಂದು ತಮ್ಮ ಅಭಿಮಾನಿಗಳು, ಸ್ನೇಹಿತರಿಗೆ ಮನವಿ ಮಾಡಿದ್ದಾರೆ.

ಈ ವಾರ ಮದ್ಯದೊರೆ ಮಲ್ಯ ಪುತ್ರ ಸಿದ್ಧಾರ್ಥ್‌ ವಿವಾಹನವದೆಹಲಿ: ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಹಾಗೂ ಮದ್ಯ ಕಂಪನಿಯ ಮಾಜಿ ಮಾಲೀಕ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್‌ ಅವರೊಂದಿಗೆ ವಿವಾಹವಾಗುತ್ತಿರುವುದಾಗಿ ಪ್ರಕಟಿಸಿದ್ದಾರೆ. ಇದೇ ವಾರ ವಿವಾಹ ನಡೆಯಲಿದೆ.

ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಮಾಹಿತಿ ನೀಡಿದ್ದು, 1 ವಾರ ಕಾಲ ವಿವಾಹ ಸಂಬಂಧಿ ಆಚರಣೆ ಹಾಗೂ ಸಂಭ್ರಮ ನಡೆಯಲಿರುವುದಾಗಿ ತಿಳಿಸಿದ್ದಾರೆ.

ಮೂಲತಃ ಮಾನಸಿಕ ಆರೋಗ್ಯ ವೃದ್ಧಿಸುವ ಕೆಲಸಗಳಲ್ಲಿ ತೊಡಗಿರುವ ಸಿದ್ಧಾರ್ಥ್‌ ಇದಕ್ಕೂ ಮೊದಲು ಹಲವು ಚಲನಚಿತ್ರ ಹಾಗೂ ಟೆಲಿವಿಷನ್‌ ಸರಣಿಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಹ್ಯಾಲೋವೀನ್‌ ಅಚರಣೆ ವೇಳೆ ನಿಶ್ಚಿತಾರ್ಥ ಮಾಡಿಕೊಂಡಿರುವ ಕುರಿತು ಭಾವಿ ದಂಪತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿದ್ದರು.

PREV

Recommended Stories

ಅಕ್ರಮ ಪತ್ತೆಯಾದರೆ ಬಿಹಾರ ಮತಪಟ್ಟಿಗೆ ತೆಡೆ: ಸುಪ್ರೀಂ
ಭಾರತ ವಿರುದ್ಧ ಯುದ್ಧ: ಬಿಲಾವಲ್‌ ಬೆದರಿಕೆ