ಮದುವೆ ಖರ್ಚಿಗೆ ಕೇತನ್‌ ಬಳಿ 1 ಕೋಟಿ ರು.ಪೀಕಿದ್ದ ಸಿಯಾ!

KannadaprabhaNewsNetwork |  
Published : Jun 30, 2026, 03:00 AM IST
sia

ಸಾರಾಂಶ

ಭಾವಿ ಪತಿ ಕೇತನ್‌ ಅಗರ್ವಾಲ್‌ನನ್ನು ಕೊಂದ ಸಿಯಾ ಗೋಯಲ್‌ ಬಗ್ಗೆ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ಆಕೆ ಮದುವೆ ಶಾಪಿಂಗ್‌ ನೆಪದಲ್ಲಿ ಕೇತನ್‌ನಿಂದ 1 ಕೋಟಿ ರು. ಹಣ ಡೆದಿದ್ದಳು. ಆದರೆ ಅದನ್ನು ಶಾಪಿಂಗ್‌ಗೆ ಬಳಸದೇ ತನ್ನ ಪ್ರಿಯಕರ ಚೇತನ್‌ ಚೌಧರಿ ಖಾತೆಗೆ ವರ್ಗಾಯಿಸಿದ್ದಳು ಎಂದು ತಿಳಿದು ಬಂದಿದೆ.

 ಪುಣೆ: ಭಾವಿ ಪತಿ ಕೇತನ್‌ ಅಗರ್ವಾಲ್‌ನನ್ನು ಕೊಂದ ಸಿಯಾ ಗೋಯಲ್‌ ಬಗ್ಗೆ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ಆಕೆ ಮದುವೆ ಶಾಪಿಂಗ್‌ ನೆಪದಲ್ಲಿ ಕೇತನ್‌ನಿಂದ 1 ಕೋಟಿ ರು. ಹಣ ಡೆದಿದ್ದಳು. ಆದರೆ ಅದನ್ನು ಶಾಪಿಂಗ್‌ಗೆ ಬಳಸದೇ ತನ್ನ ಪ್ರಿಯಕರ ಚೇತನ್‌ ಚೌಧರಿ ಖಾತೆಗೆ ವರ್ಗಾಯಿಸಿದ್ದಳು ಎಂದು ತಿಳಿದು ಬಂದಿದೆ.

1 ಕೋಟಿ ರು. ಹಣ ತೆಗೆದುಕೊಂಡಿದ್ದಳು

‘ಪೊಲೀಸರು ನಡೆಸಿದ ವೇಳೆ ಈ ಅಂಶ ಬಯಲಾಗಿದೆ. ಸಿಯಾ, ಕೇತನ್‌ನಿಂದ ಮದುವೆ ಶಾಪಿಂಗ್‌ ಹಾಗೂ ಇನ್ನಿತರ ಸಿದ್ಧತೆಗೆಂದು 1 ಕೋಟಿ ರು. ಹಣ ತೆಗೆದುಕೊಂಡಿದ್ದಳು. ಅದನ್ನು ತನ್ನ ಮದುವೆಗೆ ಬಳಸುವ ಬದಲು ಪೂರ್ತಿ ಹಣವನ್ನು ಚೇತನ್‌ಗೆ ವರ್ಗಾಯಿಸಿ ಆತನ ವೃತ್ತಿ ಜೀವನ ಕಟ್ಟಿಕೊಳ್ಳಲು ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುವುದಕ್ಕೆ ನೀಡಿದ್ದಳು’ ಎಂದು ಮೂಲಗಳು ಹೇಳಿವೆ.

ಆ ಬಳಿಕ, ಕೇತನ್‌ನನ್ನು ಯಾರಿಗೂ ಗೊತ್ತಾಗದಂತೆ ಕೊಂದು 3 ವರ್ಷದ ಬಳಿಕ ಮದುವೆಯಾಗುವುದಕ್ಕೆ ಸಿಯಾ ಹಾಗೂ ಚೇತನ್‌ ಚೌಧರಿ ನಿರ್ಧರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್‌ ವಶಕ್ಕೆ:

ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಅವರ ಪೊಲೀಸ್ ಕಸ್ಟಡಿಯನ್ನು ಜು.3 ರವರೆಗೆ ಪುಣೆ ನ್ಯಾಯಾಲಯ ವಿಸ್ತರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಜಂಟಿ ಸಮಿತಿ
ನಮ್ಮ ಸಂಪರ್ಕಕ್ಕೆ ಜ್ಞಾನೇಶ್ ಯತ್ನ : ರಾಹುಲ್‌ ಬಾಂಬ್