ಸೋನಿಯಾ ಆತ್ಮಕತೆ ಆರೇ ದಿನದಲ್ಲಿ 2 ಲಕ್ಷ ಸೇಲ್‌, ₹20 ಕೋಟಿ ಆದಾಯ!

Published : Nov 17, 2026, 08:08 AM IST
Sonia gandhi

ಸಾರಾಂಶ

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಅಧಿಕೃತ ಬಿಡುಗಡೆ ಸಮಾರಂಭ ಸೋಮವಾರ ದೆಹಲಿಯಲ್ಲಿ ನಡೆಯಿತು.ವಿಶೇಷವೆಂದರೆ ನ.10ರಂದು ಮಾರುಕಟ್ಟೆಗೆ ಬಂದ ಕೃತಿಯ 2 ಲಕ್ಷ (200,000) ಪ್ರತಿಗಳು ಮಾರಾಟವಾಗಿವೆ.

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಅಧಿಕೃತ ಬಿಡುಗಡೆ ಸಮಾರಂಭ ಸೋಮವಾರ ದೆಹಲಿಯಲ್ಲಿ ನಡೆಯಿತು.

ನ.10ರಂದು ಮಾರುಕಟ್ಟೆಗೆ ಬಂದ ಕೃತಿ

ವಿಶೇಷವೆಂದರೆ ನ.10ರಂದು ಮಾರುಕಟ್ಟೆಗೆ ಬಂದ ಕೃತಿಯ 2 ಲಕ್ಷ (200,000) ಪ್ರತಿಗಳು ಮಾರಾಟವಾಗಿವೆ. ಈ ಮೂಲಕ ಪ್ರಕಾಶನ ಸಂಸ್ಥೆಗೆ ಒಂದೇ ವಾರದಲ್ಲಿ ಸುಮಾರು 20 ಕೋಟಿ ರು. ಆದಾಯ ಹರಿದುಬಂದಿದೆ.

ಕೃತಿ ಬಿಡುಗಡೆ ಸಮಾರಂಭ

ಕೃತಿ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮತ್ತು ಬಿಜೆಪಿ ನಾಯಕ ಅಮರಿಂದರ್ ಸಿಂಗ್ ಮೊದಲಾದವರಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಮಿತಾಭ್‌ಗೆ ಗ್ಯಾಂಗ್‌ಸ್ಟರ್‌ ಗೋಲ್ಡಿ ಹತ್ಯೆ ಬೆದರಿಕೆ
ಇಂದು ಸೋನಿಯಾ ಆತ್ಮಕತೆ ಬಿಡುಗಡೆ ಸಮಾರಂಭ