ರೊಟ್ಟಿ ಮೇಲೆ ಮುಸ್ಲಿಂ ವ್ಯಾಪಾರಿ ಉಗುಳಿದ್ದು ಸಮರ್ಥಿಸಿದ ಬಾಲಿವುಡ್‌ ನಟ, ನಿರ್ಮಾಪಕ ಸೋನು ಸೂದ್‌

KannadaprabhaNewsNetwork |  
Published : Jul 21, 2024, 01:20 AM ISTUpdated : Jul 21, 2024, 04:49 AM IST
ರೋಟಿ | Kannada Prabha

ಸಾರಾಂಶ

ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬ ರೊಟ್ಟಿಯ ಮೇಲೆ ಉಗುಳಿದ್ದನ್ನು ಬಾಲಿವುಡ್‌ ನಟ, ನಿರ್ಮಾಪಕ ಸೋನು ಸೂದ್‌ ಸಮರ್ಥಿಸಿಕೊಂಡಿದ್ದಾರೆ.

ಮುಂಬೈ: ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬ ರೊಟ್ಟಿಯ ಮೇಲೆ ಉಗುಳಿದ್ದನ್ನು ಬಾಲಿವುಡ್‌ ನಟ, ನಿರ್ಮಾಪಕ ಸೋನು ಸೂದ್‌ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಈ ಘಟನೆಯನ್ನು ಅವರು ಶ್ರೀರಾಮ ಶಬರಿಯಿಂದ ಎಂಜಲು ಹಣ್ಣು ತಿಂದಿದ್ದಕ್ಕೆ ಹೋಲಿಕೆ ಮಾಡಿದ್ದಾರೆ. ಆದರೆ ಈ ಹೋಲಿಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಘಟನೆ ತೀವ್ರ ವಿರೋಧ ವ್ಯಕ್ತವಾಗಿದೆ.

ಶನಿವಾರ ಸೋನ್‌ ಸೂದ್‌ ಅವರು ತಮ್ಮ ಟ್ವೀಟರ್‌ ಖಾತೆಯಲ್ಲಿ ರೋಟಿ ತಯಾರಿಸುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ಹಂಚಿಕೊಂಡು, ‘ನಮ್ಮ ಶ್ರೀ ರಾಮನೇ ಶಬರಿಯ ಎಂಜಲು ಹಣ್ಣುಗಳನ್ನು ತಿಂದಿದ್ದಾರೆ, ಹಾಗಾದರೆ ನಾನು ಈ ರೋಟಿಗಳನ್ನು ಏಕೆ ತಿನ್ನಬಾರದು? ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು ಸೋದರ. ಮಾನವೀಯತೆ ಎಂಬುವುದು ಹಾಗೆಯೇ ಉಳಿಯಬೇಕು, ಜೈ ಶ್ರೀ ರಾಮ್’ ಎಂದು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!