ಭಾರತ ಸುರಕ್ಷಿತ, ಇಲ್ಲಿನ ಜನರು ಒಳ್ಳೆಯವರು: ಗ್ಯಾಂಗ್‌ರೇಪ್‌ ಸಂತ್ರಸ್ತೆ

KannadaprabhaNewsNetwork |  
Published : Mar 06, 2024, 02:19 AM ISTUpdated : Mar 06, 2024, 03:08 PM IST
ಅತ್ಯಾಚಾರ | Kannada Prabha

ಸಾರಾಂಶ

ಜಾರ್ಖಂಡ್‌ನಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯು ಕೆಲವರು ಮಾಡಿದ ತಪ್ಪಿಗೆ ಸಮಸ್ತ ಭಾರತೀಯರನ್ನು ದೂಷಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಡುಮ್ಕಾ (ಬಿಹಾರ): ಕಳೆದ ಶುಕ್ರವಾರ ಜಾರ್ಖಂಡ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಸ್ಪೇನ್‌ ಪ್ರಜೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ‘ತಮ್ಮನ್ನು ಭಾರತೀಯರು ಚೆನ್ನಾಗಿ ನೋಡಿಕೊಂಡಿದ್ದಾರೆ, ಒಂದು ದುರ್ಘಟನೆಗೆ ಎಲ್ಲರನ್ನು ದೂಷಿಸುವುದು ತಪ್ಪು’ ಎಂದು ಹೇಳಿದ್ದಾರೆ.

ನೇಪಾಳಕ್ಕೆ ತೆರಳುವ ಮುನ್ನ ಮಾತನಾಡಿದ ಅವರು,‘ನಾವು ಭಾರತದಲ್ಲಿ 20,000 ಕಿಲೋಮೀಟರ್‌ ಪ್ರಯಾಣಿಸಿದ್ದೇವೆ.

ಒಂದು ದುರ್ಘಟನೆಗೆ ಇಡೀ ಭಾರತೀಯರನ್ನು ನಾನು ದೂಷಿಸುವುದಿಲ್ಲ. ಭಾರತೀಯರು ಒಳ್ಳೆಯವರು’ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಅತ್ಯಾಚಾರ ಸಂತ್ರಸ್ಥರಿಗೆ ಜಿಲ್ಲಾಡಳಿತ 10 ಲಕ್ಷ ರು. ಪರಿಹಾರ ಚೆಕ್ ವಿತರಿಸಿದೆ. ಘಟನೆಯ ಸಂಬಂಧಿಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ