ಕೋಲ್ಕತಾ: ಶನಿವಾರ ನಡೆದ 6ನೇ ಹಂತದ ಮತದಾನದ ವೇಳೆ ಪ.ಬಂಗಾಳದ ಝಾರ್‌ಗ್ರಾಮ್‌ನ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಪ್ರಣತ್ ತುಡು ಹಾಗೂ ಭದ್ರತಾ ಸಿಬ್ಬಂದಿ ಅವರ ಮೇಲೆ ಶಂಕಿತ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಿದ ಘಟನೆ ನಡೆದಿದೆ.
ಹೀಗಾಗಿ ದಾಳಿಕೋರರಿಂದ ಪಾರಾಗಲು ಅಭ್ಯರ್ಥಿ ಸ್ಥಳದಿಂದ ಓಡಿ ಹೋಗಿದ್ದಾರೆ.ಇದೇ ವೇಳೆ ಅವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಶೀಲ್ಡ್‌ಗಳನ್ನು ಹಿಡಿದುಕೊಂಡು ಹೋಗುತ್ತಿರುವ ನಾಟಕೀಯ ದೃಶ್ಯಗಳು ವಿಡಿಯೋದಲ್ಲಿ ಸೆರೆ ಆಗಿವೆ.
ಘಟನೆಗೆ ‘ತೃಣಮೂಲ ಕಾಂಗ್ರೆಸ್ ಗೂಂಡಾಗಳು ಕಾರಣ’ ಎಂದು ತುಡು ಆರೋಪಿಸಿದ್ದಾರೆ