ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) 100 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಇಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಭಾಗಿಯಾಗಿದ್ದರು. ಈ ವೇಳೆ ಸಂಘದ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಅವರ ಭಾಷಣವನ್ನು ನಟ ಸಲ್ಮಾನ್‌ ಖಾನ್‌ ತೀವ್ರ ಗಮನವಿಟ್ಟು ಕೇಳಿಸಿಕೊಂಡಿದ್ದು ಗಮನ ಸೆಳೆಯಿತು.

ಆರ್‌ಎಸ್‌ಎಸ್‌ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗಿಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) 100 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಇಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಭಾಗಿಯಾಗಿದ್ದರು. ಈ ವೇಳೆ ಸಂಘದ ಮುಖ್ಯಸ್ಥ ಡಾ. ಮೋಹನ್‌ ಭಾಗ್ವತ್‌ ಅವರ ಭಾಷಣವನ್ನು ನಟ ಸಲ್ಮಾನ್‌ ಖಾನ್‌ ತೀವ್ರ ಗಮನವಿಟ್ಟು ಕೇಳಿಸಿಕೊಂಡಿದ್ದು ಗಮನ ಸೆಳೆಯಿತು.

ಆರ್‌ಎಸ್‌ಎಸ್‌ ಶತಾಬ್ದಿ ವರ್ಷದ ನಿಮಿತ್ತ ಮುಂಬೈನ ನೆಹರೂ ಕೇಂದ್ರ ಸಭಾಂಗಣದಲ್ಲಿ 2 ದಿನದ ‘100 ವರ್ಷದ ಸಂಘ ಪಯಣ: ಹೊಸ ಭರವಸೆ’ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶನಿವಾರ ಸಲ್ಮಾನ್‌ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಆ ಬಳಿಕ ಕಾರ್ಯಕ್ರಮ ಪ್ರವೇಶಿಸಿದ ನಟ, ಭಾಗ್ವತ್‌ ಅವರ ಭಾಷಣವನ್ನು ತೀವ್ರ ಲಕ್ಷ್ಯಗೊಟ್ಟು ಕೇಳಿಸಿಕೊಂಡರು.

ಈ ವೇಳೆ ಖ್ಯಾತ ಚಿತ್ರ ನಿರ್ಮಾಪಕ ಸುಭಾಷ್‌ ಘೈ, ಕವಿ, ಲೇಖಕ ಪ್ರಸೂದ್‌ ಜೋಶಿ ಉಪಸ್ಥಿತರಿದ್ದರು. ಚರ್ಚೆಗಾಗಿ ಸಮಾಜದ ವಿವಿಧ ಗಣ್ಯರು ಮತ್ತು ಆರ್‌ಎಸ್‌ಎಸ್‌ ನಾಯಕರನ್ನು ಆಹ್ವಾನಿಸಲಾಗಿತ್ತು.