ಪ್ರತೀ ವಾರ ತಮ್ಮ ಕೆಲಸದ ವರದಿ ಕೊಡಿ, ಇಲ್ಲದಿದ್ದರೆ ವಜಾ : ಸರ್ಕಾರಿ ನೌಕರರಿಗೆ ಮಸ್ಕ್‌

KannadaprabhaNewsNetwork |  
Published : Feb 24, 2025, 12:30 AM ISTUpdated : Feb 24, 2025, 05:38 AM IST
ಮಸ್ಕ್‌ | Kannada Prabha

ಸಾರಾಂಶ

ಅಮೆರಿಕದ ಕಾರ್ಯಕ್ಷಮತೆ ವಿಭಾಗ(ಡಾಜ್‌)ದ ಮುಖ್ಯಸ್ಥರಾಗಿರುವ ಎಲಾನ್‌ ಮಸ್ಕ್‌, ಪ್ರತೀ ವಾರ ತಮ್ಮ ಕೆಲಸದ ವರದಿಯನ್ನು ಸಲ್ಲಿಸುವಂತೆ ಸರ್ಕಾರಿ ನೌಕರರಿಗೆ ಆದೇಶಿಸಿದ್ದಾರೆ. ಅಂತೆ ಮಾಡದಿದ್ದಲ್ಲಿ ಕೆಲಸದಿಂದ ವಜಾ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಕಾರ್ಯಕ್ಷಮತೆ ವಿಭಾಗ(ಡಾಜ್‌)ದ ಮುಖ್ಯಸ್ಥರಾಗಿರುವ ಎಲಾನ್‌ ಮಸ್ಕ್‌, ಪ್ರತೀ ವಾರ ತಮ್ಮ ಕೆಲಸದ ವರದಿಯನ್ನು ಸಲ್ಲಿಸುವಂತೆ ಸರ್ಕಾರಿ ನೌಕರರಿಗೆ ಆದೇಶಿಸಿದ್ದಾರೆ. ಅಂತೆ ಮಾಡದಿದ್ದಲ್ಲಿ ಕೆಲಸದಿಂದ ವಜಾ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.

ಸರ್ಕಾರಿ ಕೆಲಸಗಾರರನ್ನು ಕಡಿಮೆಗೊಳಿಸಿ ಮತ್ತು ಮರುರೂಪಿಸುವ ಕಾರ್ಯವನ್ನು ಡಾಜ್‌ ಭರದಿಂದ ಮಾಡಬೇಕು ಎಂದು ಅದ್ಯಕ್ಷ ಟ್ರಂಪ್‌ ಟ್ರುತ್‌ನಲ್ಲಿ ಪೋಸ್ಟ್‌ ಮಾಡಿದ ಕೆಲ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ.

ಭದ್ರತೆ ಮತ್ತು ವಿನಿಮಯ ಆಯೋಗ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ, ತಾವು ಒಂದು ವಾರದಲ್ಲಿ ಮಾಡಿದ ಕೆಲಸದ ಸಾರಾಂಶವನ್ನು 5 ವಾಕ್ಯಗಳಲ್ಲಿ ತಿಳಿಸಲು ಸೂಚಿಸಲಾಗಿದೆ.

ಪರಾಗ್‌ಗೂ ಹೀಗೇ ಮಾಡಿದ್ದರು;

3 ವರ್ಷಗಳ ಹಿಂದೆ ಟ್ವೀಟರ್‌ನ ಸಿಇಒ ಆಗಿದ್ದ ಭಾರತ ಮೂಲದ ಪರಾಗ್‌ ಅಗರ್ವಾಲ್‌ ಅವರ ಬಳಿಯೂ ಕೆಲಸ ವರದಿ ಕೇಳಲಾಗಿತ್ತು ಹಾಗೂ ಅವರು ಅದನ್ನು ಕೊಡದ ಕಾರಣ ವಜಾಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮನೆಮನೆಗೆ ಆಯುರ್ವೇದ ಅಗತ್ಯ : ಸಚ್ಚಿದಾನಂದ ಶ್ರೀ
ಆಪರೇಷನ್‌ ಸಿಂದೂರ ವೇಳೆ ಸೈನಿಕರಿಗೆ ಚಹಾ ಕೊಟ್ಟಿದ್ದ ಬಾಲಕಗೆ ಬಾಲ ಪುರಸ್ಕಾರ