ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ 2025ನೇ ಸಾಲಿನ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಮೇನಲ್ಲಿ ನಡೆದ ಆಪರೇಷನ್‌ ಸಿಂದೂರ ವೇಳೆ ಭಾರತೀಯ ಸೈನಿಕರಿಗೆ ಚಹಾ, ಲಸ್ಸಿ ನೀಡಿದ್ದ ಬಾಲಕ ಸೇರಿ 20 ಮಕ್ಕಳು ಈ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ 2025ನೇ ಸಾಲಿನ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಮೇನಲ್ಲಿ ನಡೆದ ಆಪರೇಷನ್‌ ಸಿಂದೂರ ವೇಳೆ ಭಾರತೀಯ ಸೈನಿಕರಿಗೆ ಚಹಾ, ಲಸ್ಸಿ ನೀಡಿದ್ದ ಬಾಲಕ ಸೇರಿ 20 ಮಕ್ಕಳು ಈ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಪಂಜಾಬ್‌ನ ಫಿರೋಜ್‌ಪುರದ ಶ್ರವಣ್‌ ಸಿಂಗ್‌

ಪಂಜಾಬ್‌ನ ಫಿರೋಜ್‌ಪುರದ ಶ್ರವಣ್‌ ಸಿಂಗ್‌ ಎನ್ನುವ 10 ವರ್ಷದ ಬಾಲಕನಿಗೆ ಬಾಲ ಪುರಸ್ಕಾರ ಲಭಿಸಿದೆ. ಈತ ಆಪರೇಷನ್‌ ಸಿಂದೂರ ಸಂದರ್ಭದಲ್ಲಿ ಗಡಿ ಉದ್ವಿಗ್ನತೆ ನಡುವೆಯೂ ತನ್ನ ಮನೆ ಸಮೀಪದ ಗಡಿಯಲ್ಲಿದ್ದ ಸೈನಿಕರಿಗೆ ನೆರವಾಗಿದ್ದ. 

ನೀರು, ಹಾಲು, ಲಸ್ಸಿ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದ

ಯಾವ ಭಯವೂ ಇಲ್ಲದೆ ನೀರು, ಹಾಲು, ಲಸ್ಸಿ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದ. ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಬಾಲಕ ಸಂತಸ ವ್ಯಕ್ತಪಡಿಸಿದ್ದು, ‘ಬಹಳ ಹೆಮ್ಮೆಯಾಗುತ್ತಿದೆ. ನಾನು ಎಂದಿಗೂ ಇದರ ಬಗ್ಗೆ ಕನಸು ಕಂಡಿರಲಿಲ್ಲ’ ಎಂದಿದ್ದಾನೆ.