ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್‌ ಮತ್ತಷ್ಟು ತಡ

KannadaprabhaNewsNetwork |  
Published : Dec 19, 2024, 12:32 AM ISTUpdated : Dec 19, 2024, 04:17 AM IST
ಸುನಿತಾ ವಿಲಿಯಮ್ಸ್ | Kannada Prabha

ಸಾರಾಂಶ

ಹಲವು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ.

ಕೇಪ್‌ ಕನವೆರಲ್‌: ಹಲವು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ. 

ಈ ಮುಂಚಿನ ಫೆಬ್ರವರಿ ಬದಲು ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ಗೆ ಮರಳುವ ಸಾಧ್ಯತೆ ಇದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ’ನಾಸಾ’ ಹೇಳಿದೆ.

ಬೋಯಿಂಗ್‌ನ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರು ಕಳೆದ ಜೂನ್‌ನಲ್ಲಿ ಅಂತರಿಕ್ಷ ಕೇಂದ್ರಕ್ಕೆ ಇಬ್ಬರು ತೆರಳಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ ಇಬ್ಬರು ಅಲ್ಲಿಯೇ ಉಳಿದಿದ್ದರು. ಸುನಿತಾ ಮತ್ತು ವಿಲ್ಮೋರ್‌ ಮುಂದಿನ ವರ್ಷದ ಫೆಬ್ರವರಿಗೆ ಭೂಮಿಗೆ ಹಿಂದಿರುಗಲಿದ್ದಾರೆ ಎಂದು ನಾಸಾ ಹೇಳಿತ್ತು.

ಆದರೆ ಬುಧವಾರ ನಾಸಾ ಹೊಸ ಹೇಳಿಕೆ ನೀಡಿದ್ದು, ವಿಲ್ಮೋರ್‌ ಮತ್ತು ವಿಲಿಯಮ್ಸ್‌ ಹಿಂತಿರುಗುವ ಮೊದಲು ಹೊಸ 4 ಸಿಬ್ಬಂದಿಯನ್ನು ಕಳುಹಿಸಬೇಕು. ಆದರೆ ಇದಕ್ಕೂ ಕೆಲವು ತಾಂತ್ರಿಕ ಸಮಸ್ಯೆಗಳು ಉಂಟಾಗಿದೆ. ಹೀಗಾಗಿ ಈ ಕಾರ್ಯಾಚರಣೆಗೆ ಒಂದು ತಿಂಗಳಿಗಿಂತ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಸುನಿತಾ ನಮತ್ತು ವಿಲ್ಮೋರ್‌ ಮಾರ್ಚ್‌ ಅಂತ್ಯದವರೆಗೆ ಅಥವಾ ಏಪ್ರಿಲ್‌ನವರೆಗೆ ಹಿಂದಿರುಗುವುದಿಲ್ಲ ಎಂದಿದೆ.

ಸ್ಪೇಸ್‌ ಎಕ್ಸ್‌ಗೆ ಈ ಯೋಜನೆಗೆ ಹೆಚ್ಚಿನ ಸಮಯ ಬೇಕಾಗಿದ್ದು, ಇದು ವಿಳಂಬಕ್ಕೆ ಕಾರಣ ಎನ್ನಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ