ಅಮೆರಿಕಕ್ಕೆ ಸ್ಮಾರ್ಟ್‌ಫೋನ್‌ಗಳ ರಫ್ತು: ಚೀನಾ ಹಿಂದಿಕ್ಕಿದ ಭಾರತ

KannadaprabhaNewsNetwork |  
Published : Aug 22, 2025, 02:01 AM IST
ಸ್ಮಾರ್ಟ್ ಫೋನ್  | Kannada Prabha

ಸಾರಾಂಶ

ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಭಾರತ ಮಹತ್ವದ ಮೈಲುಗಲ್ಲು ಸಾಧಿಸಿದ್ದು, ಅಮೆರಿಕಕ್ಕೆ ರಫ್ತು ಮಾಡುವ ಸ್ಮಾರ್ಟ್‌ಫೋನ್‌ಗಳ ಪ್ರಮಾಣದಲ್ಲಿ ಚೀನಾವನ್ನು ಹಿಂದಿಕ್ಕಿದೆ ಎಂದು ಸಂಶೋಧನಾ ಸಂಸ್ಥೆ ಕನಾಲಿಸ್ ವರದಿ ಮಾಡಿದೆ.

  ನವದೆಹಲಿ: ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಭಾರತ ಮಹತ್ವದ ಮೈಲುಗಲ್ಲು ಸಾಧಿಸಿದ್ದು, ಅಮೆರಿಕಕ್ಕೆ ರಫ್ತು ಮಾಡುವ ಸ್ಮಾರ್ಟ್‌ಫೋನ್‌ಗಳ ಪ್ರಮಾಣದಲ್ಲಿ ಚೀನಾವನ್ನು ಹಿಂದಿಕ್ಕಿದೆ ಎಂದು ಸಂಶೋಧನಾ ಸಂಸ್ಥೆ ಕನಾಲಿಸ್ ವರದಿ ಮಾಡಿದೆ.

ಮೇಕ್ ಇನ್ ಇಂಡಿಯಾ, ಪಿಎಲ್‌ಐನಂತಹ ಯೋಜನೆಗಳಿಂದಾಗಿ ಭಾರತ ಔದ್ಯಮಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಈ ವರ್ಷದ 2ನೇ ತ್ರೈಮಾಸಿಕದಲ್ಲಿ (ಏಪ್ರಿಲ್‌-ಜೂನ್), ಅಮೆರಿಕಕ್ಕೆ ಸ್ಮಾರ್ಟ್‌ಫೋನ್‌ಗಳ ರಫ್ತಿನಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಕಳೆದ ವರ್ಷ ಈ ಪಾಲು ಶೇ.31ರಷ್ಟಿತ್ತು. ಆದರೆ ಈ ವರ್ಷ ಶೇ.13ರಷ್ಟು ಏರಿಕೆಯಾಗಿ, ಶೇ.44ಕ್ಕೆ ತಲುಪಿದೆ. ಆದರೆ ಚೀನಾದ ಪಾಲು ಕಳೆದ ವರ್ಷದ ಶೇ.61ರಿಂದ ಈ ವರ್ಷ ಶೇ.25ಕ್ಕೆ ಇಳಿದಿದೆ ಎಂದು ಕನಾಲಿಸ್‌ನ ವರದಿ ತಿಳಿಸಿದೆ.

2014-15 ಮತ್ತು 2024-25ರ ನಡುವೆ, ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನಾ ವಲಯವು ಗಮನಾರ್ಹ ಪರಿವರ್ತನೆಗೆ ಸಾಕ್ಷಿಯಾಗಿದೆ. ಇದೇ ಅವಧಿಯಲ್ಲಿ ಮೊಬೈಲ್ ಫೋನ್‌ಗಳ ಉತ್ಪಾದನೆಯು 18,000 ಕೋಟಿ ರು.ನಿಂದ 5.45 ಲಕ್ಷ ಕೋಟಿ ರು.ಗೆ ಏರಿದೆ, ರಫ್ತು 1,500 ಕೋಟಿ ರು.ನಿಂದ 2 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಇದು 127 ಪಟ್ಟು ಏರಿಕೆ ದಾಖಲಿಸಿದೆ. ಎಲೆಕ್ಟ್ರಾನಿಕ್ ಸರಕುಗಳ ಉತ್ಪಾದನೆಯು 2014-15ರಲ್ಲಿ 1.9 ಲಕ್ಷ ಕೋಟಿ ರು.ನಿಂದ 2024-25ರಲ್ಲಿ 11.3 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ, ಇದು 6 ಪಟ್ಟು ಹೆಚ್ಚಳವನ್ನು ಸೂಚಿಸುತ್ತದೆ. 2014-15ರಲ್ಲಿ ಕೇವಲ 2ರಷ್ಟಿದ್ದ ಮೊಬೈಲ್ ಉತ್ಪಾದನಾ ಘಟಕಗಳ ಸಂಖ್ಯೆ 2024-25ರ ವೇಳೆಗೆ 300ಕ್ಕೆ ವಿಸ್ತರಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಮಾಹಿತಿ ಆಧರಿಸಿ ಪತ್ರಿಕಾ ಮಾಹಿತಿ ಬ್ಯೂರೋ ಪೋಸ್ಟ್‌ ಮಾಡಿದೆ.

 ವರ್ಷ2023 - 2024

ಚೀನಾ ಶೇ.61 ಶೇ.25

ಭಾರತ ಶೇ.31 ಶೇ.44

ಮೊಬೈಲ್‌ ಉತ್ಪಾದನೆ ಪ್ರಮಾಣ

2014 - 18000 ಕೋಟಿ ರು.

2024 - 5.45 ಲಕ್ಷ ಕೋಟಿ ರು.

==

ಕಂಪನಿಗಳ ಸಂಖ್ಯೆ

2013 - 2

2024 - 300

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕರ್ನಾಟಕ ಅಷ್ಟೇ ಅಲ್ಲ, ದೇಶದ ಬಿಜೆಪಿ ಕಾರ್ಯಕರ್ತರಿಗೂ ಸ್ಪೂರ್ತಿ ಯಡಿಯೂರಪ್ಪ
ಬಹುಮತ ವಿಜಯ - 120 ನಂಬರ್ ಪಡೆದ ನಟ । ಇಂದು ಬೆಳಗ್ಗೆ 10ಕ್ಕೆ ಸಿಎಂ ಆಗಿ ಶಪಥ